ಡೈಲಿ ವಾರ್ತೆ: 12/ಏಪ್ರಿಲ್/2025

ಕ್ಯಾಂಟರ್ ಹಿಂಬದಿಗೆ ಕೆಎಸ್ಆರ್ ಟಿಸಿ ಬಸ್‌ ಡಿಕ್ಕಿ – ಹಲವರಿಗೆ ಗಾಯ

ಕುದೂರು; ರಸ್ತೆ ಬದಿ ಪಂಚರ್ ಆಗಿ ನಿಂತಿದ್ದ ಕ್ಯಾಂಟರ್ ಹಿಂಬದಿಗೆ ಕೆಎಸ್ಆರ್ ಟಿಸಿ (ಅಶ್ವಮೇಧ) ಬಸ್‌ ಡಿಕ್ಕಿ ಹೂಡೆದ ಪರಿಣಾಮ ಚಾಲಕ ಸೇರಿದಂತೆ ಸುಮಾರು 20 ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ಕುದೂರು ಪೂಲೀಸ್ ಠಾಣೆ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ಶನಿವಾರ ಸಂಭವಿಸಿದೆ.

ಚಿಕ್ಕಮಗಳೂರು ಕಡೆಯಿಂದ ಬೆಂಗಳೂರಿಗೆ ಅತಿ ವೇಗವಾಗಿ ಬರುತ್ತಿದ್ದ ಕೆಎಸ್ಆರ್ ಟಿಸಿ (ಅಶ್ವಮೇಧ) ಬಸ್ ಸೂಲೂರು ಬಳಿ ಪಂಚರ್ ಆಗಿ ನಿಂತಿದ್ದ ಕ್ಯಾಂಟ‌ರ್ ವಾಹನಕ್ಕೆ ಢಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಬಸ್ಸಿನ ಮುಂಭಾಗ ಸಂಪೂರ್ಣ ಜಖಂಗೊಂಡಿದ್ದು ಬಸ್ಸಿನ ಒಳಗೆ ಸಿಲಿಕಿದ ಚಾಲಕನನ್ನು ಸ್ಥಳೀಯರು ಜೆಸಿಬಿ ಮೂಲಕ ಬಸ್ ನ ಅವಶೇಷಗಳನ್ನು ಬೇರ್ಪಡಿಸಿ ಹೂರತೆಗೆದಿದ್ದಾರೆ.

ಘಟನಾ ಸ್ಥಳಕ್ಷೆ ಕುದೂರು ಪಿಎಸ್‌ಐ ನವೀನ್ ಹಾಗೂ ಸಿಬ್ಬಂಧಿಗಳು ಭೇಟಿ ನೀಡಿ ಗಾಯಗೊಂಡವರನ್ನು ನೆಲಮಂಗಲ, ಬೆಂಗಳೂರಿಗೆ ಆಸ್ಪತ್ರೆಗೆ ಅಂಬುಲೆನ್ಸ್ ಮೂಲಕ ದಾಖಲಿಸಿದ್ದಾರೆ.