



ಡೈಲಿ ವಾರ್ತೆ: 03/JUNE/2025


ಉಡುಪಿ| ಕೋವಿಡ್ ಪಾಸಿಟಿವ್ ಮೊದಲ ಬಲಿ!

ಉಡುಪಿ: ಕಾಪು ತಾಲ್ಲೂಕಿನ ಬೆಳ್ಳೆ ಗ್ರಾಮದ 65 ವರ್ಷದ ಪೀಟರ್ ಮಥಾಯಸ್ ಎಂಬುವವರು ಮಣಿಪಾಲದ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟ ಬಗ್ಗೆ ವರದಿಯಾಗಿದೆ.
ಕೋವಿಡ್ ಪಾಸಿಟಿವ್ ದೃಢಪಟ್ಟಿರುವ ಹಿನ್ನಲೆಯಲ್ಲಿ ಕಾಪು ತಹಶಿಲ್ದಾರ್ ಡಾ.ಪ್ರತಿಭಾ ಆರ್ ಅವರು ಮಂಗಳವಾರ ಮೃತರ ಮನೆಗೆ ಭೇಟಿ ನೀಡಿದರು.
ಇದೇ ವೇಳೆ ಪೀಟರ್ ಮಥಾಯಸ್ ಅವರ ಮನೆಯ ಕುಟುಂಬದ ಸದಸ್ಯರ ಆರೋಗ್ಯ ವಿಚಾರಿಸಿ ಸಾಂತ್ವನ ಹೇಳಿದರು. ಬಳಿಕ ಮಾತನಾಡಿ, ಪೀಟರ್ ಅವರ ಮನೆಯವರ ಆರೋಗ್ಯ ಪರೀಕ್ಷೆ ನಡೆಸಲಾಗಿದ್ದು, ಯಾರಲ್ಲೂ ಕೂಡಾ ಕೋವಿಡ್ ಲಕ್ಷಣಗಳು ಕಂಡು ಬಂದಿರುವುದಿಲ್ಲ. ಪೀಟರ್ ಮಥಾಯಸ್ ಅವರ ಮೃತ ದೇಹ ಇನ್ನೂ ಆಸ್ಪತ್ತೆಯಲ್ಲಿಯೇ ಇದೆ.
ಬುಧವಾರ ಅಂತ್ಯಸಂಸ್ಕಾರ ಕೋವಿಡ್ SOP ಅನುಸರಿಸಿ ಅಂತ್ಯಸಂಸ್ಕಾರ ಕೈಗೊಳ್ಳಲಾಗುವುದು ಎಂದು ತಹಶೀಲ್ದಾರ್ ತಿಳಿಸಿದ್ದಾರೆ.
ಕಳೆದ ಕೆಲವು ದಿನಗಳಿಂದ ಪೀಟರ್ ಮಥಾಯಸ್ ಅವರು ಕರುಳಿನ ಕ್ಯಾನ್ಸರ್ ನಿಂದ ಬಳಲುತ್ತಿದ್ದರು. ಮೇ.29 ರಂದು ಹೈಪರ್ ಟೆನ್ಷನ್ ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ದರು. ಅಲ್ಲಿ ಕೋವಿಡ್ ಟೆಸ್ಟ್ ಮಾಡಿದಾಗ ಕೋರೋನ ದೃಢಪಟ್ಟಿರುತ್ತದೆ. ಜೂ.2ರಂದು ಅಪರಾಹ್ನ ಮೃತಪಟ್ಟಿರುತ್ತಾರೆ ಎಂದು ತಹಶೀಲ್ದಾರ್ ಮಾಹಿತಿ ನೀಡಿದ್ದಾರೆ.
ತಹಶಿಲ್ದಾರ್ ಮತ್ತು ವೈದ್ಯರ ತಂಡ, ಆಶಾ ಕಾರ್ಯಕರ್ತೆಯರು ಮಂಗಳವಾರ ಮನೆಗೆ ಭೇಟಿ ನೀಡಿ ಊರಿನ ಜನರಿಗೆ ಕೊರೊನ ಮುನ್ನೆಚ್ಚರಿಗಳ ಬಗ್ಗೆ ಅರಿವು ಮೂಡಿಸಿದರು. ಕೊರೊನ SOP ಪಾಲಿಸುವಂತೆ ಸೂಚನೆ ನೀಡಿದರು.
ತಾಲ್ಲೂಕು ವೈದ್ಯಾಧಿಕಾರಿ ಡಾ.ವಾಸುದೇವ್, ಶಿರ್ವ ಮೆಡಿಕಲ್ ಆಫೀಸರ್ ಡಾ.ಸುಬ್ರಹ್ಮಣ್ಯ, ವೈದ್ಯೆ ಡಾ.ವೈಷ್ಣವಿ, ಆಶಾ ಕಾರ್ಯಕರ್ತೆ ಯಶೋದ, ರೆವಿನ್ಯೂ ಇನ್ಸ್ಪೆಕ್ಟರ್ ಇಜ್ಜಾರ್ ಸಾಬಿರ್, ಗ್ರಾಮಾಡಳಿತಾಧಿಕಾರಿ ಪ್ರದೀಪ್ ಹಾಜರಿದ್ದರು.