



ಡೈಲಿ ವಾರ್ತೆ: 03/JUNE/2025


ಆವರ್ಸೆ ಗ್ರಾ. ಪಂ. ಅಧ್ಯಕ್ಷರಾಗಿ ದಿವಾಕರ ಗಾಣಿಗ, ಉಪಾಧ್ಯಕ್ಷರಾಗಿ ಸಮೀನಾ ಬಾನು ಅವಿರೋಧ ಆಯ್ಕೆ

ಕೋಟ: ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲ್ಲೂಕಿನ
ಕೋಟ ಬ್ಲಾಕ್ ಕಾಂಗ್ರೆಸ್ ವ್ಯಾಪ್ತಿಯ ಆವರ್ಸೆ ಗ್ರಾಮ ಪಂಚಾಯತ್ ಗೆ ಅಧ್ಯಕ್ಷರಾಗಿ ದಿವಾಕರ ಗಾಣಿಗ ಹಾಗೂ ಉಪಾಧ್ಯಕ್ಷರಾಗಿ ಸಮೀನಾ ಬಾನು ಅವರು ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ.
ಕೋಟ ಬ್ಲಾಕ್ ಕಾಂಗ್ರೆಸ್ ನ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಹಾರ್ಥಿಕ ಅಭಿನಂದನೆ ಸಲ್ಲಿಸಿರುತ್ತಾರೆ.