ಡೈಲಿ ವಾರ್ತೆ: 03/JUNE/2025

ಐಪಿಎಲ್ 2025 ಫೈನಲ್: PBKS ವಿರುದ್ಧ RCBಗೆ ರೋಚಕ ಜಯ – ಕೊನೆಗೂ 18 ವರ್ಷಗಳ ಬಳಿಕ ಮೊದಲ ಟ್ರೋಫಿ ಎತ್ತಿಹಿಡಿದ ವಿರಾಟ್ ಕೊಹ್ಲಿ!

ಅಹಮದಾಬಾದ್‌: ಕೋಟ್ಯಂತರ ಅಭಿಮಾನಿಗಳ ಪ್ರಾರ್ಥನೆ ಕೊನೆಗೂ ಈಡೇರಿದೆ. ಒಂದು ಬಾರಿಯಾದರೂ ಕಪ್‌ ಗೆಲ್ಲಬೇಕೆಂಬ 18 ವರ್ಷಗಳ ಕನಸು ಈ ಬಾರಿ ನನಸಾಗಿದೆ. ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಮೊದಲ ಬಾರಿಗೆ ಚಾಂಪಿಯನ್‌ ಪಟ್ಟ ಅಲಂಕರಿಸುವ ಮೂಲಕ ʻಈ ಸಲ ಕಪ್‌ ನಮ್ದೇʼ ಎಂದು ಹುರಿದುಂಬಿಸುತ್ತಿದ್ದ ಅಭಿಮಾನಿಗಳಿಗೆ ಗಿಫ್ಟ್‌ ನೀಡಿದೆ.