



ಡೈಲಿ ವಾರ್ತೆ: 05/JUNE/2025


ಬೈಂದೂರು| ಅಕ್ರಮ ಜಾನುವಾರು ಸಾಗಾಟ – ಮೂವರ ಬಂಧನ!

ಬೈಂದೂರು: ಅಕ್ರಮವಾಗಿ ಜಾನುವಾರು ಸಾಗಾಟ ಮಾಡುತ್ತಿದ್ದ ವೇಳೆ ಪೊಲೀಸರು ದಾಳಿ ನಡೆಸಿ ಮೂವರನ್ನು ಬಂಧಿಸಿದ ಘಟನೆ ಬೈಂದೂರು ತಾಲೂಕಿನ ಎತ್ತರೆ ಜಂಕ್ಷನ್ ಬಳಿ ನಡೆದಿದೆ.
ಅಬ್ರಾರುಲ್ ಹಾಕ್ ಮೋಮಿನ್, ಮೊಹಮ್ಮದ್ ಮತ್ತು ಮೊಹಮ್ಮದ್ ಆರೀಫ್ ಬಂಧಿತರು.
ಆರೋಪಿಗಳು ಕೊಲ್ಲೂರು ಕಡೆಗೆ ಈಚರ್ ವಾಹನದಲ್ಲಿ
ಅಕ್ರಮವಾಗಿ 10 ಜಾನುವಾರಗಳನ್ನು ಮಾಂಸಕ್ಕಾಗಿ ಸಾಗಾಟ ಮಾಡುತ್ತಿದ್ದರು ಎನ್ನಲಾಗಿದೆ.
ಬೈಂದೂರು ಪೊಲೀಸರು ಆರೋಪಿಗಳನ್ನು ಬಂಧಿಸಿ ಕೃತ್ಯಕ್ಕೆ ಬಳಸಿದ ವಾಹನ ಮತ್ತು ಜಾನುವಾರುಗಳನ್ನು ವಶಕ್ಕೆ ಪಡೆದಿದ್ದಾರೆ.
ಬೈಂದೂರು ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.