



ಡೈಲಿ ವಾರ್ತೆ: 10/JUNE/2025


ಕೋಟ: SLRM ತ್ಯಾಜ್ಯ ಘಟಕ ಸಿಬ್ಬಂದಿಗಳಿಗೆ ಸಿಕ್ಕಿದ ನಗದು ಹಾಗೂ ಗ್ಯಾಸ್ ಪುಸ್ತಕ ವಾರಸುದಾರರಿಗೆ ಹಸ್ತಾಂತರ

ಕೋಟ: ಕೋಟತಟ್ಟು ಗ್ರಾಮ ಪಂಚಾಯತ್ ಎಸ್.ಎಲ್.ಆರ್.ಎಂ ತ್ಯಾಜ್ಯ ನಿರ್ವಹಣಾ ಘಟಕದ ಸಿಬ್ಬಂದಿಗಳಿಗೆ ಕಸ ವಿಲೇವಾರಿ ಸಂದರ್ಭದಲ್ಲಿ ದೊರೆತ ನಗದು ಹಾಗೂ ಗ್ಯಾಸ್ ಪುಸ್ತಕ ದಾಖಲೆಯನ್ನು ಸಂಬಂಧಿಸಿದ ಮಾಲೀಕರಿಗೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸತೀಶ್ ಕುಂದರ್ ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿ ರವೀಂದ್ರ ರಾವ್ ಸಮ್ಮುಖದಲ್ಲಿ ಪ್ರಾಮಾಣಿಕವಾಗಿ ಸಂಬಂಧಿಸಿದ ಮಾಲೀಕರಿಗೆ ಹಸ್ತಾಂತರಿಸಿರು.
ಘನ ಮತ್ತು ದ್ರವ ತ್ಯಾಜ್ಯ ನಿರ್ವಹಣಾ ಘಟಕದ ಸಿಬ್ಬಂದಿಗಳಾದ ರಂಜನಿ ಗೀತಾ ಹಾಗೂ ಶಾರದಾ ಇವರ ಬದ್ಧತೆಯನ್ನು ಗ್ರಾಮಸ್ಥರು ಮುಕ್ತ ಕಂಠದಿಂದ ಶ್ಲಾಘಿಸಿದರು.