



ಡೈಲಿ ವಾರ್ತೆ: 10/JUNE/2025


ಕುಂದಾಪುರದಲ್ಲಿ ನಾಪತ್ತೆ ಪ್ರಕರಣ| ವಿವಾಹಿತ ಮಹಿಳೆ ವಿವಾಹಿತನೊಂದಿಗೆ ಪರಾರಿ?

ಕುಂದಾಪುರ| ಕುಂದಾಪುರದ ವಿಠ್ಠಲವಾಡಿಯಿಂದ ಜೂ. 8 ರಂದು ನಾಪತ್ತೆಯಾಗಿದ್ದ ವಿವಾಹಿತ ಮಹಿಳೆ ವಿವಾಹಿತನೊಂದಿಗೆ ಪರಾರಿಯಾಗಿರುವುದಾಗಿ ತಿಳಿದುಬಂದಿದೆ.
ಕೋಡಿ ಸಮೀಪ ಸೇತುವೆ ಮೇಲೆ ಸ್ಕೂಟಿ, ಚಪ್ಪಲಿ ಹಾಗೂ ಡೆತ್ ನೋಟ್ ಬರೆದಿಟ್ಟು ನದಿಗೆ ಹಾರುವ ನಾಟಕ ಅಡಿ ಮಹಿಳೆ ವಿವಾಹಿತನೊಂದಿಗೆ ಪರಾರಿಯಾಗಿದ್ದಾಳೆ ಎನ್ನುವ ವಿಚಾರ ಬೆಳಕಿಗೆ ಬಂದಿದೆ.
ಕುಂದಾಪುರದ ಫುಡ್ ಮಾರ್ಕ್ ಹೋಟೆಲಿನಲ್ಲಿ ಕೆಲಸ ಮಾಡಿಕೊಂಡಿರುವ ವಿವಾಹಿತ ಸಾಹಿಲ್ (27) ಜೊತೆ ಎರಡು ಮಕ್ಕಳ ತಾಯಿ ಹೀನಾ ಕೌಸರ್ (33) ಪರಾರಿಯಾಗಿದ್ದಾಳೆ ಎಂದು ತಿಳಿದುಬಂದಿದೆ.
ಮಹಿಳೆಯ ಪತಿ ವಿದೇಶದಲ್ಲಿದ್ದು, ತನ್ನ ಎರಡು ಮಕ್ಕಳು ಮತ್ತು ತಾಯಿಯೊಂದಿಗೆ ಮಹಿಳೆ ವಾಸವಾಗಿದ್ದಳು.
ಹೀನಾ ಕೌಸರ್ ಹಾಗೂ ಸಾಹಿಲ್ ನಾಪತ್ತೆಯಾಗಿರುವ ಬಗ್ಗೆ ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.