
ಡೈಲಿ ವಾರ್ತೆ: 12/JUNE/2025
ಅಹಮದಾಬಾದ್ ವಿಮಾನ ದುರಂತ:
ಮಂಗಳೂರು ಮೂಲದ ಸಹ ಪೈಲಟ್ ಕ್ಲೈವ್ ಕುಂದರ್
ಮೃತ್ಯು!

ಅಹಮದಾಬಾದ್: ಟೇಕಾಫ್ ಆದ ಕೆಲವೇ ಕ್ಷಣಗಳಲ್ಲಿ ತಾಂತ್ರಿಕ ದೋಷದಿಂದ ಏರ್ ಇಂಡಿಯಾ ವಿಮಾನ ಪತನಗೊಂಡ ದುರಂತದಲ್ಲಿ ವಿಮಾನದಲ್ಲಿದ್ದ 242 ಮಂದಿ ಪ್ರಯಾಣಿಕರ ಪೈಕಿ ಮಂಗಳೂರು ಮೂಲದ ಮುಂಬೈ ನಿವಾಸಿ ಸಹ ಪೈಲಟ್ ಕ್ಲೈವ್ ಕುಂದರ್ ಒಬ್ಬರಾಗಿದ್ದರು. ಅವರು ದುರಂತದಲ್ಲಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಕ್ಲೈವ್ ಕುಂದರ್ ಅವರು ಪ್ಯಾರಿಸ್ ಏರ್ ಇಂಕ್‌ನಲ್ಲಿ ತರಬೇತಿ ಪಡೆದಿದ್ದರು.
ಕ್ಲೈವ್ ಕುಂದರ್ ಅವರು 1,100 ಗಂಟೆಗಳ ಹಾರಾಟದ ಅನುಭವ ಹೊಂದಿದ್ದರು. 8,200 ಕ್ಕೂ ಹೆಚ್ಚು ಹಾರಾಟದ ಅನುಭವ ಹೊಂದಿದ್ದ ಲೈನ್ ಟ್ರೈನಿಂಗ್ ಕ್ಯಾಪ್ಟನ್ ಸುಮಿತ್ ಸಭರ್ವಾಲ್ ಅವರಿಗೆ ಸಹಾಯ ಮಾಡುತ್ತಿದ್ದರು.
ಇಬ್ಬರು ಶಿಶುಗಳು ಸೇರಿದಂತೆ 232 ಪ್ರಯಾಣಿಕರು ಮತ್ತು 12 ಸಿಬ್ಬಂದಿಯನ್ನು ಹೊತ್ತೊಯ್ಯುತ್ತಿದ್ದ ವಿಮಾನವು ಹಾರಾಟ ಆರಂಭಿಸಿದ ಸುಮಾರು ಐದು ನಿಮಿಷಗಳ ನಂತರ ಪತನಗೊಂಡಾಗ ಇವರಿಬ್ಬರೇ ಫೈಟ್‌ಅನ್ನು ನಿಯಂತ್ರಣ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.