

ಡೈಲಿ ವಾರ್ತೆ: 24/DEC/2025
ಭಟ್ಕಳ| ಡ್ರಂಕ್ ಅಂಡ್ ಡ್ರೈವ್ ಪ್ರಕರಣ: ಭಟ್ಕಳ ಗ್ರಾಮೀಣ ಠಾಣೆ ಸಿಪಿಐ, ಹೆಚ್.ಪಿ.ಸಿ ಅಮಾನತು

ಭಟ್ಕಳ| ಡ್ರಂಕ್ ಅಂಡ್ ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯ ಸಿಪಿಐ ಮಂಜುನಾಥ್ ಲಿಂಗಾರೆಡ್ಡಿಯನ್ನು ಅಮಾನತು ಮಾಡಲಾಗಿದೆ. ಇದರ ಜೊತೆಗೆ ಆತನಿಗೆ ಸಾತ್ ನೀಡಿ ಭ್ರಷ್ಟಾಚಾರದಲ್ಲಿ ಭಾಗಿಯಾದ ಭಟ್ಕಳ ಮಂಕಿ ಮೂಲದ ಹೆಡ್ ಕಾನಸ್ಟೇಬಲ್ ಅಶೋಕ್ ನಾಯ್ಕ ಕೂಡ ಅಮಾನತ್ತಾಗಿದ್ದಾರೆ.
ಅಮಾನತು ಆದ ಸಿಪಿಐ ಹಾಗೂ ಹೆಚ್.ಪಿ.ಸಿ
ಪ್ರಾಥಮಿಕ ತನಿಖೆಯಲ್ಲಿ ಆರೋಪ ಸಾಬೀತಾದ ಹಿನ್ನೆಲೆ ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಆದೇಶದ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ.
ಕೆಲ ದಿನಗಳ ಹಿಂದೆ ಸಿಪಿಐ ಮಂಜುನಾಥ್ ವಿರುದ್ಧ ಡ್ರಂಕ್ ಡ್ರೈವ್ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದಲ್ಲಿ ಸಾರ್ವಜನಿಕರಿಂದ 15 ಸಾವಿರ ರೂಪಾಯಿ ದಂಡ ವಸೂಲಿ ಮಾಡಲಾಗಿತ್ತು. ಇನ್ನು ಹಣವನ್ನು ಕೋರ್ಟ್‌ಗೆ ಪಾವತಿಸದೆ ನಿರ್ಲಕ್ಷ ಮಾಡಲಾಗಿದ್ದು ಈ ವಿಷಯ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಡ್ರಂಕ್ ಆಂಡ್ ಡ್ರೈವ್ ಸಂಬಂಧ ಜುಲೈ ತಿಂಗಳಲ್ಲಿ ಸಿಪಿಐ ವಿರುದ್ಧ ಅಧಿಕೃತ ದೂರು ದಾಖಲಾಗಿತ್ತು.
ದೂರು ದೂರು ಆಧರಿಸಿ ತನಿಖೆಗೆ ಸೂಚನೆ ನೀಡಲಾಗಿದ್ದು, ಪ್ರಾಥಮಿಕ ತನಿಖೆಯಲ್ಲಿ ಸಿಪಿಐ ಮಂಜುನಾಥ್ ತಪ್ಪು ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ. ತನಿಖೆಯಲ್ಲಿ ಸಿಪಿಐ ಲೋಪ ಕಂಡುಬಂದ ಹಿನ್ನೆಲೆ ಅವರನ್ನು ಅಮಾನತು ಮಾಡಲಾಗಿದೆ.