
ಡೈಲಿ ವಾರ್ತೆ:JAN/13/2026
ಮಹಾವಿಷ್ಣು ಕ್ರಿಕೆಟರ್ಸ್ ಕಾರ್ಕಡ ಸಾಲಿಗ್ರಾಮ ವತಿಯಿಂದ ರಾಜ್ಯ ಮಟ್ಟದ ಕ್ರಿಕೆಟ್ ಪಂದ್ಯಾಟ ಮುಂದೂಡಿಕೆ

ಕೋಟ: ಮಹಾವಿಷ್ಣು ಕ್ರಿಕೆಟರ್ಸ್ ಕಾರ್ಕಡ ಸಾಲಿಗ್ರಾಮ ವತಿಯಿಂದ 40 ಗಜಗಳ ರಾಜ್ಯ ಮಟ್ಟದ ಕ್ರಿಕೆಟ್ ಪಂದ್ಯಾಟವು ಜನವರಿ 17 ಮತ್ತು 18ರಂದು ನಿಗದಿಪಡಿಸಲಾಗಿದ್ದು ಕಾರಣಾಂತರದಿಂದ ಮುಂದೂಡಲಾಗಿದೆ.
ಜನವರಿಯಲ್ಲಿ ಉಡುಪಿ ಪರ್ಯಾಯೋತ್ಸವ, ಸಾಲಿಗ್ರಾಮ ಜಾತ್ರೋತ್ಸವವು ಇರುವುದರಿಂದ ಕ್ರಿಕೆಟ್ ತಂಡಗಳಿಗೆ ಕ್ಲಪ್ತ ಸಮಯಕ್ಕೆ ಭಾಗವಹಿಸಲು ಅನಾನುಕೂಲ ವಾಗಿದ್ದು ಅಲ್ಲದೆ ಆಯೋಜಕರಿಗೆ ಸಮಯದ ಅಭಾವ ಆಗಿದ್ದರಿಂದ ಈಗಾಗಲೇ ನಡೆಸಲು ನಿಗಧಿಪಡಿಸಲಾಗಿರುವ ರಾಜ್ಯ ಮಟ್ಟದ ಕ್ರಿಕೆಟ್ ಪಂದ್ಯಾಟವನ್ನು 2026ರ ಏಪ್ರಿಲ್ ತಿಂಗಳಲ್ಲಿ ನಡೆಸಲಾಗುವುದು ಎಂದು ಮಹಾವಿಷ್ಣು ಕ್ರಿಕೆಟರ್ಸ್ ಸಂಸ್ಥೆಯ ಅಯೋಜಕರಾದ ಶ್ರೀನಿವಾಸ ಕಾರ್ಕಡ, ಶಿಶಿರ್ ಕುಮಾರ್ ಹಾಗೂ ಸಂಗಡಿಗರು ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮುಂದೆ ನಡೆಯುವ ಈ ರಾಜ್ಯಮಟ್ಟದ ಕ್ರಿಕೆಟ್ ಪಂದ್ಯಾಟದ ಸಂಪೂರ್ಣ ಉಸ್ತುವಾರಿಯನ್ನು ಗಣೇಶ್ ಕೆ ನೆಲ್ಲಿಬೆಟ್ಟು ರವರು ವಹಿಸಿಲಿದ್ದು, ಪಂದ್ಯಾಟದ ದಿನಾಂಕವನ್ನು ಇನ್ನು ಒಂದು ವಾರದಲ್ಲಿ ಮಾಧ್ಯಮದ ಮೂಲಕ ತಿಳಿಸಲಾಗುವುದು.