ಡೈಲಿವಾರ್ತೆ:22/ಮಾರ್ಚ್/2026

ಮಂಗಳೂರಿಗೆ ಬಂತು ಅಮೆರಿಕದ ಅನಿಲ ನೌಕೆ: ರಾಜ್ಯದಲ್ಲಿ ಎಲ್‌ಪಿಜಿ ಅಭಾವ ನೀಗುವ ಭರವಸೆ

​ಮಂಗಳೂರು: ಇರಾನ್ ಮತ್ತು ಇಸ್ರೇಲ್ ನಡುವೆ ಯುದ್ಧದ ಉದ್ವಿಗ್ನತೆ ಹೆಚ್ಚಾಗಿರುವ ನಡುವೆಯೇ, ಕರ್ನಾಟಕದ ಪಾಲಿಗೆ ಸಮಾಧಾನಕರ ಸುದ್ದಿಯೊಂದು ಬಂದಿದೆ.

ಅಮೆರಿಕದ ಟೆಕ್ಸಾಸ್‌ನಿಂದ 16,714 ಮೆಟ್ರಿಕ್ ಟನ್ ಎಲ್‌ಪಿಜಿ (LPG) ಹೊತ್ತ ಬೃಹತ್ ಕಾರ್ಗೋ ಹಡಗು ಇಂದು ಮಂಗಳೂರಿನ ನವಮಂಗಳೂರು ಬಂದರಿಗೆ ಯಶಸ್ವಿಯಾಗಿ ತಲುಪಿದೆ.

​ಪಶ್ಚಿಮ ಏಷ್ಯಾದಲ್ಲಿ ಯುದ್ಧದ ಭೀತಿಯಿಂದಾಗಿ ಇಂಧನ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಬಹುದು ಎಂಬ ಆತಂಕದ ನಡುವೆ ಆಗಮಿಸಿದ ಮೊದಲ ವಿದೇಶಿ ಹಡಗು ಇದಾಗಿದೆ.
ಮಾರ್ಚ್ 14 ರಂದು ಅಮೆರಿಕದಿಂದ ಹೊರಟಿದ್ದ ಈ ನೌಕೆ, ಇಂದು ಸುರಕ್ಷಿತವಾಗಿ ಕರಾವಳಿ ತೀರಕ್ಕೆ ಬಂದಿಳಿದಿದೆ.

ಸಿಲಿಂಡರ್ ಕೊರತೆಗೆ ಬ್ರೇಕ್:
​ಕಳೆದ ಕೆಲವು ದಿನಗಳಿಂದ ರಾಜ್ಯದಾದ್ಯಂತ ಅಡುಗೆ ಅನಿಲ (LPG) ಪೂರೈಕೆಯಲ್ಲಿ ಅಲ್ಪಮಟ್ಟಿನ ವ್ಯತ್ಯಯ ಹಾಗೂ ಅಭಾವ ತಲೆದೂರಿತ್ತು. ಇದೀಗ ಇಷ್ಟು ದೊಡ್ಡ ಪ್ರಮಾಣದ ಅನಿಲ ಸಂಗ್ರಹ ಬಂದಿರುವುದರಿಂದ, ರಾಜ್ಯದಲ್ಲಿ ಸಿಲಿಂಡರ್ ವಿತರಣೆ ಸುಗಮಗೊಳ್ಳುವ ನಿರೀಕ್ಷೆಯಿದೆ.