


ಡೈಲಿವಾರ್ತೆ:09/ಏಪ್ರಿಲ್ /2026

ಮೆಲ್ಕಾರ್ ಮಹಿಳಾ ಪದವಿ ಪೂರ್ವ ಕಾಲೇಜು ಶೇಕಡಾ 98 ಫಲಿತಾಂಶ

ಬಂಟ್ವಾಳ : 2025-26 ನೇ ಶೈಕ್ಷಣಿಕ ವರ್ಷದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಮೆಲ್ಕಾರ್ ಮಹಿಳಾ ಪದವಿ ಪೂರ್ವ ಕಾಲೇಜು ಶೇಕಡಾ 98 ಫಲಿತಾಂಶದ ದಾಖಲಿರಿಸುತ್ತದೆ.
ಈ ಪೈಕಿ 22 ವಿದ್ಯಾರ್ಥಿನಿಯರು ವಿಶಿಷ್ಟ ದರ್ಜೆಯಲ್ಲಿ,
60 ವಿದ್ಯಾರ್ಥಿನಿಯರು ಪ್ರಥಮ ದರ್ಜೆ ಅಂಕಗಳೊಂದಿಗೆ ಉತ್ತೀರ್ಣರಾಗಿದ್ದಾರೆ. ಕಲಾ ವಿಭಾಗದ ರಹಿಷಾ ಫಾತಿಮಾ 510 ಅಂಕ, ವಾಣಿಜ್ಯ ವಿಭಾಗದ ಫಾತಿಮತ್ ಸುರಯ್ಯ 580 ಅಂಕ ಹಾಗೂ ವಿಜ್ಞಾನ ವಿಭಾಗದ ಆಯಿಷಾ 527 ಅಂಕಗಳನ್ನು ಪಡೆದು ಸಂಸ್ಥೆಗೆ ಪ್ರಥಮ ಸ್ಥಾನಿಗಳಾಗಿರುತ್ತಾರೆ.