


ಡೈಲಿವಾರ್ತೆ:09/ಏಪ್ರಿಲ್ /2026

ರಾಜ್ಯ ಮಟ್ಟದಲ್ಲಿ ಎಕ್ಸಲೆಂಟ್ ಸಾಧನೆ: ಕುಂದಾಪುರದ ಎಕ್ಸಲೆಂಟ್ ಕಾಲೇಜು ವಿದ್ಯಾರ್ಥಿಗಳ ಭರ್ಜರಿ ಫಲಿತಾಂಶ – 597 ಅಂಕಗಳೊಂದಿಗೆ ಶ್ರೇಷ್ಟ ಸ್ಥಾನ

ಕುಂದಾಪುರ: 2025-26ನೇ ಸಾಲಿನ ಶೈಕ್ಷಣಿಕ ವರ್ಷದ ದ್ವಿತೀಯ ಪಿ.ಯು.ಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದ್ದು, ಕುಂದಾಪುರದ ಎಕ್ಸಲೆಂಟ್ ಪದವಿ ಪೂರ್ವ ಕಾಲೇಜಿನ ವಿಜ್ಞಾನ ವಿಭಾಗದ ಕುಮಾರಿ ಮಾನ್ಯ 600ರಲ್ಲಿ 597, ಅನುಪ್ ಶೇಖರ್ ನಾಯ್ಕ 600 ರಲ್ಲಿ 595 ಅಂಕಗಳೊಂದಿಗೆ ರಾಜ್ಯದಲ್ಲಿಯೇ ಅತ್ಯುತ್ತಮ ರ‍್ಯಾಂಕ್‌ನ್ನು ಗಳಿಸಿ ಎಕ್ಸಲೆಂಟ್ ಇತಿಹಾಸದಲ್ಲಿ ಹೊಸ ದಾಖಲೆಯನ್ನು ನಿರ್ಮಿಸಿದ್ದಾರೆ.
ಒಟ್ಟು ಹಾಜರಾದ 314ವಿದ್ಯಾರ್ಥಿಗಲ್ಲಿ 232ವಿದ್ಯಾರ್ಥಿಗಳು ವಿಶಿಷ್ಟಶ್ರೇಣಿಯಲ್ಲಿ ಹಾಗೂ 82 ವಿದ್ಯಾರ್ಥಿಗಳು ಪ್ರಥಮಶ್ರೇಣಿಯಲ್ಲಿ ಉತ್ತೀರ್ಣರಾಗುವುದರೊಂದಿಗೆ ರಾಜ್ಯದಲ್ಲಿ ಉತ್ತಮ ಸಾಧನೆಯನ್ನು ಮಾಡಿದೆ.
ಬಾಲಗೌಡ ಬಸವರಾಜ್ ಮಂಗೋಜಿ(592), ಆಯುಷ್‌ಶೆಣೈ(592), ಕಿಶನ್‌ಕುಮಾರ್ ಗಿರೀಶ್‌ಹೆಗ್ಡೆ(592), ಸನ್ಸಿತಾ.ಎಸ್.ಎನ್(592), ಸಾನ್ವಿಶೆಟ್ಟಿ(591), ತನ್ವಿಶೆಟ್ಟಿ(590), ತ್ರಿಶಾ(590) ಒಟ್ಟು 9 ರ‍್ಯಾಂಕ್‌ಗಳೊಂದಿಗೆ ರಾಜ್ಯದಲ್ಲಿ ಅತ್ಯುತ್ತಮ ಶೈಕ್ಷಣಿಕ ಸಾಧನೆಯನ್ನು ಮಾಡಿದ್ದಾರೆ.
ಈ ರೀತಿ ಶೈಕ್ಷಣಿಕ ಕ್ಷೇತ್ರದಲ್ಲಿ ಹೊಸ ದಾಖಲೆ ನಿರ್ಮಾಣ ಮಾಡಿದ ಎಲ್ಲಾ ವಿದ್ಯಾರ್ಥಿಗಳಿಗೆ ಎಂ.ಎಂ. ಹೆಗ್ಡೆ ಎಜುಕೇಶನಲ್ & ಚಾರಿಟೇಬಲ್ ಟ್ರಸ್ಟ್ನ ಅಧ್ಯಕ್ಷರಾಗಿರುವ ಶ್ರೀ ಎಂ.ಮಹೇಶ್‌ಹೆಗ್ಡೆಯವರು, ಹಾಗೂ ಶ್ರೀಮತಿ ದೀಪಾ ಎಂ.ಹೆಗ್ಡೆ, ಪ್ರಾಂಶುಪಾಲರಾದ ನಾಗರಾಜ್‌ಶೆಟ್ಟಿ ಹಾಗೂ ಬೋಧಕ-ಬೋಧಕೇತರ ವೃಂದದವರು ಅಭಿನಂದನೆ ಸಲ್ಲಿಸಿದ್ದಾರೆ.