


ಪಿಯುಸಿ ಫಲಿತಾಂಶ : ಮುಹಮ್ಮದ್ ರಾಶಿಕ್ ಗೆ 556 ಅಂಕಗಳು

ಬಂಟ್ವಾಳ : ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಮೊಡಂಕಾಪು ಪದವಿಪೂರ್ವ ಕಾಲೇಜು ವಿದ್ಯಾರ್ಥಿ ಮುಹಮ್ಮದ್ ರಾಸೀಕ್ 556 ಅಂಕ ಗಳಿಸಿದ್ದು, 92.67 ಶೇಕಡಾ ಫಲಿತಾಂಶ ದಾಖಲಿಸಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿರುತ್ತಾರೆ.
ಈತ ತಲಪಾಡಿ ನಿವಾಸಿ ದಿ. ಅಬ್ದುಲ್ ರಝಾಕ್ ಹಾಗೂ ಆಮಿನಾ ದಂಪತಿಯ ಪುತ್ರ.