ಡೈಲಿವಾರ್ತೆ:10/ಏಪ್ರಿಲ್ /2026

ಪಿಯುಸಿ ಫಲಿತಾಂಶ ; ಶಿಕ್ಷಕ ದಂಪತಿಯ ಪುತ್ರಿ ಸ್ನೇಹಲ್ ಲುವಿಸ್ – 581 ಅಂಕಗಳ ಸಾಧನೆ

ಬಂಟ್ವಾಳ : 2025-26ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಬಂಟ್ವಾಳದ ಮೊಡಂಕಾಪು ಕಾರ್ಮೆಲ್ ಪಿಯು ಕಾಲೇಜಿನ ವಿದ್ಯಾರ್ಥಿನಿ ಸ್ನೇಹಲ್ ಲಿನೊರಾ ಲುವಿಸ್ ಅವರು 581 ಅಂಕಗಳನ್ನು (ಶೇಕಡಾ 96.83) ಗಳಿಸುವ ಮೂಲಕ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.

ಇವರು ಮೊಡಂಕಾಪು ಇನ್ಫೆಂಟ್ ಜೀಜಸ್ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕ ಸುನಿಲ್ ಲುವಿಸ್ ಹಾಗೂ ಬೋಗೊಡಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಲವೀನಾ ಪ್ರಮಿಳಾ ಮಾರ್ಟಿಸ್ ದಂಪತಿಯ ಪುತ್ರಿ.