


ಡೈಲಿವಾರ್ತೆ:11/ಏಪ್ರಿಲ್ /2026

ಐರೋಡಿ ಗೋಳಿಬೆಟ್ಟು ಶಾಲೆಯಲ್ಲಿ ‘ಸಮುದಾಯದತ್ತ ಶಾಲೆ’ ಕಾರ್ಯಕ್ರಮ: English Fest, ಮಕ್ಕಳ ಸಂತೆ ಸಂಭ್ರಮ

ಕೋಟ: ಐರೋಡಿ ಗೋಳಿಬೆಟ್ಟು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ‘ಸಮುದಾಯದತ್ತ ಶಾಲೆ’ ಕಾರ್ಯಕ್ರಮದ ಅಂಗವಾಗಿ English Fest, ಮಕ್ಕಳ ಸಂತೆ ಹಾಗೂ ಬೆಂಕಿ ರಹಿತ ಅಡುಗೆ ಸ್ಪರ್ಧೆ ವೈವಿಧ್ಯಮಯವಾಗಿ ನಡೆಯಿತು.

ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳ ಪ್ರತಿಭೆಗೆ ವೇದಿಕೆ ಒದಗಿಸಲಾಗಿದ್ದು, ವಿವಿಧ ಚಟುವಟಿಕೆಗಳ ಮೂಲಕ ಶಿಕ್ಷಣದ ಜೊತೆಗೆ ಸೃಜನಶೀಲತೆಯನ್ನೂ ಉತ್ತೇಜಿಸಲಾಯಿತು. ಪೋಷಕರು ಹಾಗೂ ಊರಿನವರ ಸಕ್ರಿಯ ಭಾಗವಹಿಸುವಿಕೆಯಿಂದ ಕಾರ್ಯಕ್ರಮಕ್ಕೆ ವಿಶೇಷ ಮೆರುಗು ಸಿಕ್ಕಿತು.

ವೇದಿಕೆಯಲ್ಲಿ SDMC ಅಧ್ಯಕ್ಷೆ ಚೈತ್ರಾ ಸುಧಾಕರ್, ಮಾರ್ಗದರ್ಶಕ ಶಿಕ್ಷಕ ಹರ್ಷವರ್ಧನ್, ಉಪಾಧ್ಯಕ್ಷ ಶಿವರಾಮ್ ಕುಲಾಲ್ (ಐರೋಡಿ), ಗೌರವ ಶಿಕ್ಷಕಿ ಅಕ್ಷತಾ ಪುತ್ರನ್ ಹಾಗೂ ಪೋಷಕರಾದ ನವ್ಯ ಸುವರ್ಣಾ ಉಪಸ್ಥಿತರಿದ್ದರು.

ಸಭೆಯಲ್ಲಿ SDMC ಸದಸ್ಯರು, ಪೋಷಕರು, ಊರಿನವರು ಮತ್ತು ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ಈ ವೇಳೆ ಗೌರವ ಶಿಕ್ಷಕಿ ಅಕ್ಷತಾ ಪುತ್ರನ್ ಅವರು 5ನೇ ತರಗತಿ ವಿದ್ಯಾರ್ಥಿಗಳು, ಪೋಷಕರು, ವಾಹನ ಚಾಲಕ ಶಾದತ್ ಹುಸೇನ್ ಹಾಗೂ ಮುಖ್ಯ ಅಡುಗೆಯವರಾದ ಜ್ಯೋತಿ ಲಕ್ಷಣ ಅವರಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಿದರು.

ಬೆಂಕಿ ರಹಿತ ಅಡುಗೆ ಸ್ಪರ್ಧೆಯಲ್ಲಿ ಅದ್ವಿಕಾ ಪ್ರಥಮ, ಅಭಿಕ್ಷಾ ದ್ವಿತೀಯ ಹಾಗೂ ಸಹನಾ ತೃತೀಯ ಸ್ಥಾನ ಪಡೆದರು. ಎಲ್ಲಾ ಮಕ್ಕಳಿಗೂ ಶಾಲಾ ವತಿಯಿಂದ ಬರವಣಿಗೆ ಸಾಮಗ್ರಿ ಕಿಟ್ ಹಾಗೂ ಉಚಿತ ಸಮವಸ್ತ್ರಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಮಹೇಶ ಮೊಗೇರ ಸ್ವಾಗತಿಸಿ, ಸಹಶಿಕ್ಷಕಿ ಭವಾನಿ ವಂದಿಸಿದರು. ಮಹಿಮಾ ಮತ್ತು ಆದ್ಯಾ ಕಾರ್ಯಕ್ರಮವನ್ನು ನಿರೂಪಿಸಿದರು.