


ಡೈಲಿವಾರ್ತೆ:11/ಏಪ್ರಿಲ್ /2026

ಪಿಯುಸಿ ಫಲಿತಾಂಶ: ಮಹ್ಶೂಕ್ ಹುಸೈನ್‌ಗೆ 91% – ವಿಜ್ಞಾನ ವಿಭಾಗದಲ್ಲಿ ವಿಶಿಷ್ಟ ಶ್ರೇಣಿ ಸಾಧನೆ

ಮಂಗಳೂರು: ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಸೂರಿಂಜೆ ನಿವಾಸಿ ಮಹ್ಶೂಕ್ ಹುಸೈನ್ ಅವರು ವಿಜ್ಞಾನ ವಿಭಾಗದಲ್ಲಿ 547 ಅಂಕಗಳನ್ನು ಪಡೆದು ಶೇ.91ರೊಂದಿಗೆ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
ಮಂಗಳೂರಿನ ಶ್ರೀ ಚೈತಣ್ಯ ಪಿ.ಯು. ಕಾಲೇಜು, ಕೊಟ್ಟಾರದಲ್ಲಿ ವ್ಯಾಸಂಗ ಮಾಡುತ್ತಿದ್ದ ಮಹ್ಶೂಕ್ ಹುಸೈನ್ ಅವರು ತಮ್ಮ ಪರಿಶ್ರಮದಿಂದ ಉತ್ತಮ ಸಾಧನೆ ತೋರಿದ್ದಾರೆ.
ಇವರು ಸೂರಿಂಜೆ ಮಾಜಿ ಗ್ರಾಮ ಪಂಚಾಯತ್ ಸದಸ್ಯರಾದ ಮಾಲಿಕ್ ಸೂರಿಂಜೆ ಹಾಗೂ ಮೈಮುನ ದಂಪತಿಯ ಪುತ್ರರಾಗಿದ್ದಾರೆ.
ಮಹ್ಶೂಕ್ ಅವರ ಈ ಸಾಧನೆಗೆ ಪೋಷಕರು, ಶಿಕ್ಷಕರು ಹಾಗೂ ಬಂಧು-ಬಳಗ ಸಂತೋಷ ವ್ಯಕ್ತಪಡಿಸಿದ್ದಾರೆ.