ಡೈಲಿವಾರ್ತೆ:23/ಏಪ್ರಿಲ್ /2026

ಎಸ್.ಎಸ್.ಎಲ್.ಸಿ. ಪರೀಕ್ಷೆ – ತುಂಬೆ ಬಿ.ಎ. ವಿದ್ಯಾ ಸಂಸ್ಥೆಗೆ 100% ಫಲಿತಾಂಶ

ಬಂಟ್ವಾಳ : 2026 ರ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ತುಂಬೆ ವಿದ್ಯಾ ಸಂಸ್ಥೆಯು ಶೇ 100% ಫಲಿತಾಂಶ ದಾಖಲಿಸಿದೆ .

102 ಮಂದಿ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು,
29 ಮಂದಿ ಡಿಸ್ಟಿಂಕ್ಷನ್‌, 59 ಮಂದಿ ಪ್ರಥಮ ದರ್ಜೆ ಹಾಗೂ 13 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.

ಆಂಗ್ಲ ಮಾಧ್ಯಮ ವಿಭಾಗದಲ್ಲಿ 610 ಅಂಕ ಗಳಿಸಿದ ದರ್ಶಿತ್‌ ಕೆ ಕುಲಾಲ್‌ ಶಾಲೆಗೆ ಪ್ರಥಮ ಸ್ಥಾನ ಪಡೆದಿದ್ದು, ಕನ್ನಡ ಮಾಧ್ಯಮ ವಿಭಾಗದಲ್ಲಿ 559 ಅಂಕ ಗಳಿಸಿದ ಸುಜನ್‌ ಶಾಲೆಗೆ ಪ್ರಥಮ ಸ್ಥಾನ ಪಡೆದಿರುತ್ತಾನೆ.

ಅಫೀಫಾ ಅಶ್ರಫ್ (603), ಫಾತಿಮತುಲ್ ಅಫ್ನಾ ಹಾಗೂ ಸಾಜಿದಾ ಬಾನು (597) ಅಂಕಗಳನ್ನು ಪಡೆದಿದ್ದಾರೆ ಎಂದು ಶಾಲಾ ಪ್ರಕಟಣೆ ತಿಳಿಸಿದೆ.