


ಡೈಲಿವಾರ್ತೆ: 02/ಜು./2026


ರೋಟರಿ ಹಂಗಾರಕಟ್ಟೆ ಸಾಸ್ತಾನ – ಲೆಕ್ಕ ಪರಿಶೋಧಕರ ದಿನಾಚರಣೆ

ಕೋಟ: ರೋಟರಿ ಕ್ಲಬ್ ಹಂಗಾರಕಟ್ಟೆ ಸಾಸ್ತಾನ ಇವರ ವತಿಯಿಂದ ಲೆಕ್ಕ ಪರಿಶೋಧಕರ ದಿನಾಚರಣೆ ಸಂಬಂಧವಾಗಿ ಸಾಸ್ತಾನದ ಯುವ ಲೆಕ್ಕ ಪರಿಶೋಧಕಿ ಸಾಸ್ತಾನದ ವೆಂಕಟೇಶ್ ಪೈ ದಂಪತಿಗಳ ಪುತ್ರಿ C/A ವೈಷ್ಣವಿ ವಿ. ಪೈ ಇವರನ್ನು ಅವರ ಮನೆಯಲ್ಲಿ ಸಮ್ಮಾನಿಸಲಾಯಿತು.


ರೋಟರಿ ಹಂಗಾರಕಟ್ಟೆ ಸಾಸ್ತಾನದ 2026-27 ಸಾಲಿನ ನಿಯೋಜಿತ ಅಧ್ಯಕ್ಷೆ ರೊ. ಕುಸುಮಾ ಮನೋಜ್, ವೃತ್ತಿಪರ ಸೇವೆಯ ನಿರ್ದೇಶಕ ರೊ. ಮುರುಳೀಧರ ನಾಯರಿ,ರೊ. ಬಾಲಕೃಷ್ಣ ಪೂಜಾರಿ, ಸುಲತಾ ಹೆಗ್ಡೆ, ಲೀಲಾವತಿ ಗಂಗಾಧರ, ಅರವಿಂದ ಶಮ೯, ಗಣೇಶ್ ಜಿ. ಸುನಿಲ್ ಕುಮಾರ್, ಮತ್ತಿತರರು ಉಪಸ್ಥಿತರಿದ್ದರು.
ನಿಯೋಜಿತ ಕಾರ್ಯದರ್ಶಿ ರೊ. ಕೆ. ರಾಜಾರಾಮ ಐತಾಳ ಸ್ವಾಗತಿಸಿ ವಂದಿಸಿದರು.