


ಡೈಲಿವಾರ್ತೆ: 07/ಜು./2026


ಜಿಲ್ಲಾ ಹಿಂದುಳಿದ ವರ್ಗಗಳ ಉಪಾಧ್ಯಕ್ಷ ನಾಗೇಂದ್ರ ಪುತ್ರನ್ ತಂದೆ ಕೃಷ್ಣ ಬಂಗೇರ ನಿಧನ – ಗಣ್ಯರ ಸಂತಾಪ

ಕೋಟ: ಉಡುಪಿ ಜಿಲ್ಲಾ ಹಿಂದುಳಿದ ವರ್ಗಗಳ ಉಪಾಧ್ಯಕ್ಷ ಕೋಟ ನಾಗೇಂದ್ರ ಪುತ್ರನ್ ಹಾಗೂ ಪ್ರಸಿದ್ಧ ಜೀವನ್ ಮಿತ್ರ ಸಮಾಜ ಸೇವಕ ನಾಗರಾಜ್ ಪುತ್ರನ್ ಅವರ ತಂದೆ, ಕೋಟತಟ್ಟು ಗೊಬ್ಬರಬೆಟ್ಟು ನಿವಾಸಿ ಕೃಷ್ಣ ಬಂಗೇರ (79) ಅವರು ಜುಲೈ 6ರಂದು ಅಕಾಲಿಕವಾಗಿ ವಿಧಿವಶರಾಗಿದ್ದಾರೆ.
ಮೃತರು ಪತ್ನಿ, ಇಬ್ಬರು ಪುತ್ರರು ಹಾಗೂ ಓರ್ವ ಪುತ್ರಿ ಸೇರಿದಂತೆ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.
ಕೃಷ್ಣ ಬಂಗೇರ ಅವರ ನಿಧನಕ್ಕೆ ಉಡುಪಿ ಜಿಲ್ಲೆಯ ಹಲವು ಗಣ್ಯರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಮಾಜಿ ಸಚಿವ ಕೆ. ಜಯಪ್ರಕಾಶ್ ಹೆಗ್ಡೆ, ಪ್ರಮುಖ ಉದ್ಯಮಿ ದಿನೇಶ್ ಹೆಗ್ಡೆ ಮೊಳವಳ್ಳಿ, ಶಂಕರ್ ಕುಂದರ್, ಗೋಪಾಲ್ ಬಂಗೇರ, ತಿಮ್ಮ ಪೂಜಾರಿ ಸೇರಿದಂತೆ ಜಿಲ್ಲೆಯ ರಾಜಕೀಯ ಹಾಗೂ ಸಾಮಾಜಿಕ ವಲಯದ ಪ್ರಮುಖರು ಮೃತರ ನಿವಾಸಕ್ಕೆ ಭೇಟಿ ನೀಡಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ.