


ಡೈಲಿವಾರ್ತೆ: 11/ಜು./2026


ಯುವ ಸಂಗಮ: ಜುಲೈ 12 ರಂದು ಕೋಟದಲ್ಲಿ ಗಾಣಿಗ ಸಮಾಜದ ಪ್ರತಿಭೆಗಳ ಸಂಭ್ರಮ

ಕೋಟ, ಜು.11: ಗಾಣಿಗ ಯುವ ಸಂಘಟನೆ ಕೋಟ (ರಿ.), ಬ್ರಹ್ಮಾವರ ತಾಲೂಕು ವತಿಯಿಂದ ‘ಯುವ ಸಂಗಮ – ಯುವ ಮನಸ್ಸುಗಳ ಸಂಭ್ರಮ’ ಹಾಗೂ ಹಾರಾಡಿ ಮಹಾಬಲ ಗಾಣಿಗ ಪ್ರಶಸ್ತಿ ಪ್ರದಾನ ಸಮಾರಂಭ ಜು.12ರಂದು ಕೋಟದ ವಿವೇಕ ವಿದ್ಯಾಸಂಸ್ಥೆಯ ಎಂ.ಜಿ.ಎಂ. ಸಭಾಂಗಣದಲ್ಲಿ ನಡೆಯಲಿದೆ.
ಕಾರ್ಯಕ್ರಮದಲ್ಲಿ ಖ್ಯಾತ ಯಕ್ಷಗಾನ ಕಲಾವಿದ ಹಾರಾಡಿ ಮಹಾಬಲ ಗಾಣಿಗರ ಹೆಸರಿನಲ್ಲಿ ಕೊಡಮಾಡುವ ಹಾರಾಡಿ ಮಹಾಬಲ ಗಾಣಿಗ ಸಂಸ್ಕರಣಾ ಪ್ರಶಸ್ತಿಯನ್ನು ಹೆರೆಂಜಾಲು ಸುಬ್ಬಣ್ಣ ಗಾಣಿಗರಿಗೆ ನೀಡಿ ಗೌರವಿಸಲಾಗುವುದು. ಕೋಟ ಘಟಕದ ವ್ಯಾಪ್ತಿಯ ಗಾಣಿಗ ಸಮಾಜದ ಪ್ರತಿಭಾನ್ವಿತ ವಿದ್ಯಾರ್ಥಿ-ವಿದ್ಯಾರ್ಥಿನಿಯರನ್ನು ಸನ್ಮಾನಿಸಿ ಗೌರವಿಸಲಾಗುವುದು.


ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಹಿರಿ-ಕಿರಿಯ ಸಾಧಕರನ್ನು ಗುರುತಿಸಿ ಅಭಿನಂದಿಸಲಾಗುವುದು.
ಸಂಜೆಯ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸಮಾಜದ ಪ್ರತಿಭೆಗಳಿಂದ ನೃತ್ಯ ವೈವಿಧ್ಯ ಹಾಗೂ ಹೆಸರಾಂತ ಕಲಾವಿದರಿಂದ ಯಕ್ಷಗಾನ ಪ್ರದರ್ಶನ ಏರ್ಪಡಿಸಲಾಗಿದೆ ಎಂದು ಗಾಣಿಗ ಯುವ ಸಂಘಟನೆ ಕೋಟ ಘಟಕದ ಅಧ್ಯಕ್ಷ ಗಿರೀಶ್ ಗಾಣಿಗ ಬೆಟ್ಲಕ್ಕಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.