ಡೈಲಿವಾರ್ತೆ:11/ಸೆ./2026

ಬಿಗ್ ಬಾಸ್ ಸೀಸನ್ 13 ರಲ್ಲಿ ಕರಾವಳಿ
ಪ್ರತಿಭೆ ಲಿಖಿತ್ ಗೊಂದಿ ಸಾಲಿಗ್ರಾಮ

ಉಡುಪಿ: ಕಲರ್ಸ್ ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 13 ಆರಂಭವಾಗಿದೆ. 16 ಸ್ಪರ್ದಿಗಳು ತಮ್ಮ ತಮ್ಮ ಪ್ರತಿಭೆ ಮತ್ತು ಜಾಣ್ಮೆಯಿಂದ 100 ದಿನಗಳಲ್ಲಿ ಪ್ರತಿಭೆ ಪ್ರದರ್ಶಿಸಿ ಗೆಲುವಿನತ್ತ ಸಾಗಲಿದ್ದಾರೆ.

ಲಿಖಿತ್ ಗೊಂದಿ ಸಾಲಿಗ್ರಾಮ ಇವರು ಉಡುಪಿ ಜಿಲ್ಲೆಯ ಸಾಲಿಗ್ರಾಮದ, ಕಾರ್ಕಡದಲ್ಲಿ ಹುಟ್ಟಿ ತದನಂತರ ಬೆಂಗಳೂರು ಮಹಾನಗರದಲ್ಲಿ ಬೆಳೆದ ಹುಡುಗ ಲಿಖಿತ್ ಗೊಂದಿ ಸಾಲಿಗ್ರಾಮ. ಬಾಲ್ಯದಲ್ಲಿಯೇ ಅಭಿನಯದಲ್ಲಿ ಖ್ಯಾತಿ ಪಡೆದ ವಿದ್ಯಾರ್ಥಿ ಲಿಖಿತ್ ಗೊಂದ

ಮಾಡೆಲಿಂಗ್ ಕ್ಷೇತ್ರದಲ್ಲಿ ಕೂಡ ಯಶಸ್ಸು ಪಡೆದಿದ್ದರು. BBA ಪದವಿ ಪೂರೈಸಿ,ಈ ಮೊದಲು ಕಂಪನಿಯೊಂದರಲ್ಲಿ ಸೇವೆ ಮಾಡಿ,ಇದೀಗ ಜಿಮ್ ಟ್ರೈನರ್ ಆಗಿಯೂ ಜೀವನ ನಡೆಸುತ್ತಿದ್ದಾರೆ. ಅನೇಕ ಜಾಹಿರಾತುಗಳಲ್ಲಿಯೂ ಕಾಣಿಸಿ ಕೊಂಡಿದ್ದಾರೆ.

ತಾಯಿ ಪಾರ್ವತಿ ಮತ್ತು ತಂದೆ ರಾಜೀವ್ ಗೊಂದಿಯೊಂದಿಗೆ ವಾಸವಾಗಿದ್ದರು. ತಂದೆ ಮತ್ತು ಮಗ ಒಟ್ಟಿಗೆ ಬಿಗ್ ಬಾಸ್ ಅಗ್ನಿ ಪರೀಕ್ಷೆಯಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು.

ಬಿಗ್ ಬಾಸ್ ಮನೆಗೆ ಸ್ಪರ್ದಿಯಾಗಿ ಆಯ್ಕೆಯಾದಾಗ ತಂದೆ ನಡತೆ ಬಗ್ಗೆ ಸುದೀಪ್ ಅವರಲ್ಲಿ ಹೇಳಿಕೊಂಡು ತಂದೆಯಿಂದ ಪ್ರಮಾಣ ಮಾಡಿಸಿ ಕೊಂಡು ಗಮನ ಸೆಳೆದಿದ್ದರು.

ಸುರದ್ರೂಪಿ ಲಿಖಿತ್ ಇದೀಗ ಹುಡುಗಿಯರ ಕ್ರಶ್ ಆಗಿ ಕೂಡ ಸ್ಥಾನ ಪಡೆದಿದ್ದಾರೆ.ಜೀವನದಲ್ಲಿ ಅನೇಕ ಏಳುಬಿಳು ಕಂಡಿರುವ ಲಿಖಿತ್ ಗೊಂದಿ ಸಾಲಿಗ್ರಾಮ ಇವರು ಬಿಗ್ ಬಾಸ್ ಸೀಸನ್ 13 ರಲ್ಲಿ ವಿನ್ನರ್ ಆಗಿ ಬರಲು ತಾವೆಲ್ಲರೂ ಪ್ರೋತ್ಸಾಹಿಸಿ ಎಂದು ತಾಯಿ ಪಾರ್ವತಿಯವರ ಕೋರಿಕೆ.