




ಡೈಲಿವಾರ್ತೆ:14/ಅ./2026

ಮಿತ್ತಬೈಲ್ : ದಾರುಲ್ ಉಲೂಮ್ ಮಹಿಳಾ ಶರೀಅತ್ ಕಾಲೇಜು ದಶಮಾನೋತ್ಸವ ಹಾಗೂ ಸನದುದಾನ ಸಮಾರೋಪ ಸಮಾರಂಭ

ಬಂಟ್ವಾಳ : ಬಿ.ಸಿ.ರೋಡ್ ಸಮೀಪದ ಮಿತ್ತಬೈಲ್ ದಾರುಲ್ ಉಲೂಮ್ ಮಹಿಳಾ ಶರೀಅತ್ ಕಾಲೇಜಿನ ದಶಮಾನೋತ್ಸವ ಹಾಗೂ ಸನದುದಾನ ಕಾರ್ಯಕ್ರಮ
ದ ಮಿತ್ತಬೈಲ್ ಕಮ್ಯುನಿಟಿ ಹಾಲ್ನಲ್ಲಿ ನಡೆಯಿತು.
ಎಂ.ಆರ್. ಇಸ್ಮಾಯಿಲ್ ಹಾಜಿ ಪರ್ಲಿಯ ಇವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಬಂಬ್ರಾಣ ಉಸ್ತಾದ್ ಶರೀಅತ್ ಕೋರ್ಸ್ ಪೂರೈಸಿದ 33 ವಿದ್ಯಾರ್ಥಿನಿಯರಿಗೆ ಸನದುದಾನ ನೆರವೇರಿಸಿ ವಿಶೇಷ ಉಪನ್ಯಾಸ ನೀಡಿದರು
ವಿ.ಕೆ. ಅಬ್ದುಲ್ ಖಾದರ್ ಹಾಜಿ (ಬೆಂಗಳೂರು), ಶರೀಫ್ ಅರ್ಷದಿ, ಶಾಕಿರ್ ಪುತ್ತೂರು, ಬಂಟ್ವಾಳ ತಾಲೂಕು ಪಂಚಾಯತ್ ಮಾಜಿ ಉಪಾಧ್ಯಕ್ಷ ಬಿ.ಎಂ.ಅಬ್ಬಾಸ್ ಅಲಿ, ಸಿದ್ದೀಕ್ ಯಮಾನಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.
ವಿವಿಧ ಮಸೀದಿಗಳ ಅಧ್ಯಕ್ಷರಾದ ಅಹ್ಮದ್ ಬಾವ ಅಡ್ಡೂರು, ಅಬ್ದುಲ್ ರಹಿಮಾನ್ ಮಿತ್ತಬೈಲು, ಬಿ.ಎ.ಮಹಮ್ಮದ್ ಬಂಟ್ವಾಳ , ಉಬೈದ್ ಹಾಜಿ, ಗೂಡಿನಬಲಿ, ನಾಸಿರ್ ತಲಪಾಡಿ, ಝೈನುದ್ದೀನ್ ಅಡ್ಡೂರ್, ಸಲೀಂ ಟಿ.ಎಂ.ತಲಪಾಡಿ, ಶಫೀಕ್ ಡಿ.ಪಿ. ಮೊದಲಾದವರು ಉಪಸ್ಥಿತರಿದ್ದರು
ಇದೇ ವೇಳೆ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಎಂ.ಆರ್. ಇಸ್ಮಾಯಿಲ್ ಹಾಜಿ,
ಎಸ್ಕೆಎಸ್ಸೆಸ್ಸೆಫ್ ಶಾಂತಿ ಅಂಗಡಿ ಯುನಿಟ್ ಅಧ್ಯಕ್ಷ ಮೊಹಮ್ಮದ್ ಶರೀಫ್, ಜುನೈದ್ ಪರ್ಲಿಯ, ಫಳುಲ್ ದಾರಿಮಿ, ಉಮರ್ ಫೈಝಿ ಸಾಲ್ಮರ, ಎನ್.ಎಂ.ಎಸ್ ಅಧ್ಯಕ್ಷ ಅಬ್ದುಲ್ ರಹಿಮಾನ್, ಮೊಹಮ್ಮದ್ ಮಜಲ್ ಮತ್ತು ಶಬೀರ್ ಶಹರಾ ಸಿದ್ದೀಕ್ ಯಮಾನಿ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮಕ್ಕೆ ವಿಶೇಷ ಸಹಕಾರ ನೀಡಿದ ಮಿತ್ತಬೈಲ್ ಮಸೀದಿ ಪದಾಧಿಕಾರಿಗಳನ್ನು ಗೌರವಿಸಲಾಯಿತು .
ಮಿತ್ತಬೈಲ್ ದಾರುಲ್ ಉಲೂಮ್ ಮಹಿಳಾ ಶರೀಅತ್ ಕಾಲೇಜಿನ ಮೆನೇಜಿಂಗ್ ಡೈರೆಕ್ಟರ್ ಎಸ್.ಬಿ. ದಾವೂದ್ ಹನೀಫಿ ಅಡ್ಡೂರು ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು.