


ಡೈಲಿವಾರ್ತೆ: 25/ನ./2026




ಮೆಸ್ಕಾಂ ಗ್ರಾಹಕರ ಅನುಕೂಲಕ್ಕಾಗಿ ರಜಾ ದಿನಗಳಲ್ಲೂ ನಗದು ಕೌಂಟರ್ ತೆರೆಯಲು ನಿರ್ಧಾರ

ಗ್ರಾಹಕರಿಗೆ ಅನುಕೂಲ ಕಲ್ಪಿಸುವ ಹಾಗೂ ಕಂಪನಿಯ ಕಂದಾಯ ಸಂಗ್ರಹಣೆಗೆ ಉತ್ತೇಜನ ನೀಡುವ ಉದ್ದೇಶದಿಂದ ಮೆಸ್ಕಾಂ ವ್ಯಾಪ್ತಿಯ ಎಲ್ಲಾ ನಗದು ಕೌಂಟರ್ಗಳನ್ನು ಸಾರ್ವತ್ರಿಕ ರಜಾ ದಿನಗಳಲ್ಲಿಯೂ ತೆರೆಯಲು ನಿರ್ಧರಿಸಲಾಗಿದೆ.
ನವೆಂಬರ್ 2026ರ ದಿನಾಂಕ 27.11.2026 (ಶುಕ್ರವಾರ – ಕನಕದಾಸ ಜಯಂತಿ), 28.11.2026 (ಶನಿವಾರ – ನಾಲ್ಕನೇ ಶನಿವಾರ) ಹಾಗೂ 29.11.2026 (ಭಾನುವಾರ) ಸಾರ್ವತ್ರಿಕ ರಜಾ ದಿನಗಳಾಗಿದ್ದರೂ, ಈ ಮೂರು ದಿನಗಳಂದು ಮೆಸ್ಕಾಂ ಕಂಪನಿಯ ವ್ಯಾಪ್ತಿಯ ಎಲ್ಲಾ ನಗದು ಕೌಂಟರ್ಗಳು ಕಾರ್ಯನಿರ್ವಹಿಸಲಿವೆ.
ವಿದ್ಯುತ್ ಬಿಲ್ ಪಾವತಿಸಲು ಬಾಕಿ ಉಳಿಸಿಕೊಂಡಿರುವ ಗ್ರಾಹಕರಿಗೆ ರಜಾ ದಿನಗಳಲ್ಲಿಯೂ ಬಿಲ್ ಪಾವತಿಸಲು ಅವಕಾಶ ಕಲ್ಪಿಸುವುದರ ಜೊತೆಗೆ, ಕಂಪನಿಯ ಕಂದಾಯ ಸಂಗ್ರಹಣೆಗೆ ಸಹಕಾರಿಯಾಗುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
ರಜಾ ದಿನಗಳ ಕಾರಣದಿಂದ ಬಿಲ್ ಪಾವತಿಗೆ ತೊಂದರೆಯಾಗದಂತೆ ಗ್ರಾಹಕರು ಈ ಸೌಲಭ್ಯದ ಪ್ರಯೋಜನ ಪಡೆದುಕೊಳ್ಳುವಂತೆ ಮೆಸ್ಕಾಂ ವತಿಯಿಂದ ತಿಳಿಸಲಾಗಿದೆ.

