



ಡೈಲಿವಾರ್ತೆ: 29/ನ./2026




ಲಾಸ್ ಏಂಜಲೀಸ್ ವಿಮಾನ ನಿಲ್ದಾಣದಲ್ಲಿ ಭೂಕಂಪ: ಲ್ಯಾಂಡಿಂಗ್ ಸ್ಥಗಿತಗೊಳಿಸಿ ವಿಮಾನವನ್ನು ಮೇಲಕ್ಕೆ ಕೊಂಡೊಯ್ದ ಪೈಲಟ್

ವಾಷಿಂಗ್ಟನ್: ದಕ್ಷಿಣ ಕ್ಯಾಲಿಫೋರ್ನಿಯಾದ ಕರಾವಳಿ ಪ್ರದೇಶದಲ್ಲಿ ಸಂಭವಿಸಿದ 5.2 ತೀವ್ರತೆಯ ಭೂಕಂಪದಿಂದ ಲಾಸ್ ಏಂಜಲೀಸ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲೂ ಕಂಪನ ಅನುಭವವಾಗಿದೆ. ಈ ವೇಳೆ ಲ್ಯಾಂಡಿಂಗ್ಗೆ ಸಜ್ಜಾಗಿದ್ದ ಡೆಲ್ಟಾ ಏರ್ಲೈನ್ಸ್ನ ವಿಮಾನವನ್ನು ಪೈಲಟ್ ತಕ್ಷಣವೇ ಮೇಲಕ್ಕೆ ಕೊಂಡೊಯ್ದ ಘಟನೆ ವರದಿಯಾಗಿದೆ.
ಕಾನ್ಸಾಸ್ ಸಿಟಿಯಿಂದ ಲಾಸ್ ಏಂಜಲೀಸ್ಗೆ ಆಗಮಿಸುತ್ತಿದ್ದ DL1972 ಸಂಖ್ಯೆಯ ವಿಮಾನ ರನ್ವೇ ಸಮೀಪಿಸುತ್ತಿದ್ದಾಗ ಭೂಕಂಪ ಸಂಭವಿಸಿದೆ. ಕೂಡಲೇ ವಾಯು ಸಂಚಾರ ನಿಯಂತ್ರಕರು ಪೈಲಟ್ಗೆ ಮಾಹಿತಿ ನೀಡಿದ್ದು, ಅವರು ಲ್ಯಾಂಡಿಂಗ್ ಪ್ರಕ್ರಿಯೆ ಸ್ಥಗಿತಗೊಳಿಸಿ ಸುರಕ್ಷತಾ ಕ್ರಮ ಕೈಗೊಂಡಿದ್ದಾರೆ. ಈ ಘಟನೆಯ ದೃಶ್ಯಗಳು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿವೆ.
ಭೂಕಂಪದ ಪರಿಣಾಮ ವಿಮಾನ ನಿಲ್ದಾಣದ ಟರ್ಮಿನಲ್ನ ಸೀಲಿಂಗ್ ಟೈಲ್ಸ್ಗಳು ನೆಲಕ್ಕೆ ಬಿದ್ದಿದ್ದು, ಸುಮಾರು 30 ಸೆಕೆಂಡುಗಳ ಕಾಲ ಕಂಪನ ಉಂಟಾಗಿದೆ. ಘಟನೆಯಲ್ಲಿ ಯಾವುದೇ ಪ್ರಮುಖ ಹಾನಿ ಅಥವಾ ಗಾಯಗಳಾದ ವರದಿಯಾಗಿಲ್ಲ. ವಿಮಾನ ನಿಲ್ದಾಣ ಹಾಗೂ ನಗರದ ವಿವಿಧೆಡೆ ಪರಿಶೀಲನೆ ಮುಂದುವರಿದಿದೆ.

