ಡೈಲಿ ವಾರ್ತೆ : 31 ಮೇ 2022

ವರದಿ: ಶಿವಾನಂದ ಆರ್.ಬಿದರಕುಂದಿ

ವಿಜಯಪುರ: (ಮೇ.31.) ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನ ರಕ್ಕಸಗಿ ಕ್ಲಸ್ಟರ್ ವ್ಯಾಪ್ತಿಯಲ್ಲಿ ಬರುವ ಲೋಟಗೇರಿ ಗ್ರಾಮದ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸತತ 29 ವರ್ಷ ಶಿಕ್ಷಕ ವೃತ್ತಿಯನ್ನು ಪೂರೈಸಿ ಇಂದು ವಯೋನಿವೃತ್ತ ಹೊಂದಿದ ಶಾಲೆಯ ಮುಖ್ಯ ಶಿಕ್ಷಕರಾದ ಎಚ್.ಎಮ್.ವಡಗೇರಿ ಇವರನ್ನು ಅದ್ದೂರಿಯಾಗಿ ಬೀಳ್ಕೊಡಲಾತು.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವಹಿಸಿದ ಲೋಟಗೇರಿಯ ಡಾ. ವೇದಮೂರ್ತಿ ಗುರುಮೂರ್ತಿ ದೇವರು ಕಣಕಾಲಮಠ ಅವರು ವಯೋನಿವೃತ್ತಿ ಹೊಂದುವ ಎಚ್. ಎಮ್.ಮುಖ್ಯ ಶಿಕ್ಷಕ ದಂಪತಿಗಳಿಗೆ ಗ್ರಾಮದ ಪರವಾಗಿ ಸನ್ಮಾನಿಸಿ ಆಶೀರ್ವಚನ ನೀಡಿದರು.

ಶಾಲೆಯ ಮುಂದಿನ ಮುಖ್ಯ ಗುರುಗಳಾಗಿ ಅಧಿಕಾರ ಸ್ವೀಕರಿಸಿದ. ಎಂ. ಡಿ. ಅಮರವಾದಗಿ ಅವರು ಪ್ರಾಸ್ತಾವಿಕ ಮಾತನಾಡಿದರು.
ಈ ಸಂದರ್ಭದಲ್ಲಿ ಶಾಲೆಯ ವತಿಯಿಂದ ಎಲ್ಲಾಗುರುವೃಂದವರು ಸನ್ಮಾನಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಎಚ್. ಜಿ. ಮಿರ್ಜಿ ಹಾಗೂ ಕ್ಷೇತ್ರಸಮನ್ವಯಾಧಿಕಾರಿಗಳಾದ ಯು. ಬಿ. ಧರಿಕಾರ ಮತ್ತು ಶಿಕ್ಷಕರ ಸಂಘದ ಪದಾಧಿಕಾರಿಗಳು ಆಗಮಿಸಿ ನಿವೃತ್ತ ಮುಖ್ಯ ಗುರುಗಳಿಗೆ ಸನ್ಮಾನಿಸಿ, ಅವರ ಸೇವೆ ಕುರಿತ ಶ್ಲಾಘನೆ ಮಾಡಿದರು ಮತ್ತು ಮುಂದಿನ ನಿವೃತ್ತಿ ಜೀವನ ಸಂತೋಷದಾಯಕವಾಗಿರಲಿ ಎಂದು ಹಾರೈಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನುಎಸ್ ಡಿ ಎಮ್ ಸಿ ಅಧ್ಯಕ್ಷರಾದ ಲಕ್ಕಣ್ಣ ನಾಗರಬೆಟ್ಟ ವಹಿಸಿದ್ದರು

ರಕ್ಕಸಗಿ ಕ್ಲಸ್ಟರ್. ಸಿ ಆರ್ ಪಿ.ವೀರೇಶ ನವಲಿ ವಡಗೇರಿ ಗುರುಗಳ ಕುರಿತು ಸ್ವರಚಿತ ಕವನ ವಾಚನ ಮಾಡಿ ಅವರ ಸಾಧನೆ ಕುರಿತು ಮಾತನಾಡಿದರು.

ಕಾರ್ಯಕ್ರಮದಲ್ಲಿ ಗುರುಗಳು,ಗುರುಮಾತೆಯರು, ಗ್ರಾಮದ ಹಿರಿಯರು ಶಿಕ್ಷಣ ಪ್ರೇಮಿಗಳು ಉಪಸ್ಥಿತರಿದ್ದರು.
ಅಶೋಕ ಬೇನಾಳ ಕಾರ್ಯಕ್ರಮ ನಿರೂಪಣೆ ಮಾಡಿದರು. ಎಮ್ ಸಿ ಹವಾಲ್ದಾರ್ ಸ್ವಾಗತಿಸಿದರು. ಚಿದಂಬರ ಕುಲಕರ್ಣಿ ಶಿಕ್ಷಕರು ವಂದಿಸಿದರು.