ಡೈಲಿ ವಾರ್ತೆ : 30 ಜೂನ್ 2022

ಕೋಟ: ರಾಜಸ್ಥಾನದ ಟೈಲರ್ ಕನ್ನಯ್ಯಲಾಲ್ ಹತ್ಯೆಯನ್ನು ಖಂಡಿಸಿ ಕೋಟದ ಹಿಂದೂ ಜಾಗರಣಾ ವೇದಿಕೆ ವತಿಯಿಂದ ಗುರುವಾರ ಸಂಜೆ ಬೃಹತ್ ಪ್ರತಿಭಟನೆಯನ್ನು ನಡೆಸಲಾಯಿತು. ಕೋಟ ಮೀನುಮಾರುಕಟ್ಟೆಯಿಂದ ವೇದಿಕೆಯ ಕಾರ್ಯಕರ್ತರು ಸ್ಥಳೀಯ ಹಿಂದೂ ಬಾಂಧವರು ಖಂಡನಾ ಘೋಷಣೆಗಳನ್ನು ಕೂಗುತ್ತಾ ಮೆರವಣಿಗೆಯ ಮೂಲಕ ಕೋಟ ಬಸ್ ನಿಲ್ದಾಣದವರೆಗೆ ಬಂದು, ಬಸ್ ನಿಲ್ದಾಣದ ಬಳಿ ಸಭೆ ನಡೆಸಲಾಯಿತು.

ಸಭೆಯನ್ನು ಉದ್ದೇಶಿಸಿ ಮಾತನಾಡಿದ ಹಿಂದೂ ಜಾಗರಣಾ ವೇದಿಕೆಯ ಮುಖಂಡ ನವೀನಚಂದ್ರ ಉಪ್ಪುಂದ, ದೇಶದಾದ್ಯಂತ ಮುಸ್ಲಿಂ ಜಿಹಾದಿಗಳ ಅಟ್ಟಹಾಸ ಮೇರೆ ಮೀರಿದೆ ರಾಜಸ್ಥಾನದ ಬಡ ಕುಟುಂಬದ ಟೈಲರ್ ಕನ್ನಯ್ಯಲಾಲ್ ಈ ಅಟ್ಟಹಾಸಕ್ಕೆ ಇತ್ತೀಚಿಗೆ ಬಲಿಯಾದ ರ್ದುದೈವಿ. ಸಾವಿರಾರು ವರ್ಷಗಳಿಂದ ನಡೆದುಕೊಂಡು ಬಂದ ಮುಸ್ಲಲ್ಮಾರ ಈ ಕುತಂತ್ರ ರಾಜಕಾರಣಿಗಳ ತುಷ್ಠಿಕರಣ ನೀತಿಯಿಂದಾಗಿ ಈಗ ಹೆಚ್ಚಿದೆ, ಹಿಂದೂಗಳನ್ನು ಗುರುತಿಸಿ ಹತ್ಯೆಮಾಡುವ ಸರಣಿ ಮುಂದುವರೆದಿದೆ, ಈ. ಅನಿಷ್ಠ ಪದ್ದತಿ ಇಲ್ಲಿಗೆ ಕೊನೆಯಾಗಬೇಕು ಶಿವಮೊಗ್ಗದ ಹರ್ಷ, ರಾಜಸ್ಥಾನದ ಕನ್ನಯ್ಯಲಾಲ್ ,ಇನ್ನಿತರ ಹಿಂದೂ ಭಾಂಧವರ ಹಂತಕರಾದ ಜಿಹಾದಿಗಳಿಗೆ ಮರಣದಂಡನೆ ವಿಧಿಸಬೇಕು ಪೊಲೀಸ್ ಇಲಾಖೆ ನಿಷ್ಪಕ್ಷಪಾತವಾದ ತನಿಖೆ ನಡೆಸಿ ಜಿಹಾದಿಗಳ ಹೆಡಮುರಿ ಕಟ್ಟಬೇಕು ಹತ್ಯಗೊಳಗಾದ ಕುಟುಂಬಕ್ಕೆ ಸರಕಾರ ಸೂಕ್ತ ಪರಿಹಾರ ಒದಗಿಸಬೇಕು ಎಂದು ಆಗ್ರಹಿಸಿದರು.

ಮತಾಂಧರಿಗೆ ಎಚ್ಚರಿಕೆ ನೀಡಿದ ಅವರು ಇನ್ನು ಮುಂದೆ ಹಿಂದೂ ಬಾಂದವರ ನೆತ್ತರು ಹರಿದರೆ ಹಿಂದೂಗಳು ಸಹಸಿಕೊಂಡಿರುವುದಿಲ್ಲ ಎಂದು ಗುಡುಗಿದರು.ಈ ಸಂದರ್ಭದಲ್ಲಿ ಹಿಂದೂ ಜಾಗರಣಾ ವೇದಿಕೆ ಕೋಟ ಘಟಕದ ಸಂಯೋಜಕ್ ಪ್ರಶಾಂತ್ ಮಟಪಾಡಿ, ಜಿಲ್ಲಾ ಸದಸ್ಯ ರವಿ ಹೇರೂರು, ಶಂಕರ್ ಸ್ಕಂದ ಕೋಟ, ಬ್ರಹ್ಮಾವರ ತಾಲೂಕು ಸಂಯೋಜಕ್ ರಮೇಶ್ ಪಾಂಡೇಶ್ವರ, ಕೋಟ ಹಿಂದೂ ಜಾಗರಣಾ ವೇದಿಕೆಯ ಪ್ರಮುಖರಾದ ಸಮತಾ ಸುರೇಶ್, ರತ್ನಾಕರ್, ನಾಗೇಶ್ ಪೂಜಾರಿ, ರಂಜಿತ್ ಕುಮಾರ್ ,ಗಿರೀಶ್ ಆಚಾರ್ಯ ಮತ್ತಿತರರು ಉಪಸ್ಥಿತರಿದ್ದರು