ಡೈಲಿ ವಾರ್ತೆ : 23 ಜುಲೈ 2022

ಚೀನಾ: ಸಣ್ಣ ಮಗುವೊಂದು ಐದನೇ ಮಹಡಿಯಿಂದ ಕೆಳಗೆ ಬಿದ್ದಾಗ ವ್ಯಕ್ತಿಯೊಬ್ಬರು ಹಿಡಿದು ಮಗುವಿನ ಪ್ರಾಣ ರಕ್ಷಿಸಿದ ಘಟನೆ ಚೀನಾದಲ್ಲಿ ನಡೆದಿದೆ. ಸದ್ಯ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಮಗು 5ನೇ ಮಹಡಿಯಿಂದ ಕೆಳಗೆ ಬಿಳುವ ದೃಶ್ಯ



ವೀಡಿಯೋದಲ್ಲಿ ಕಾಣುವಂತೆ, ಸಣ್ಣ ಮಗುವೊಂದು ಐದನೇ ಮಹಡಿಯ ಕಿಟಕಿಯಿಂದ ಕೆಳಗೆ ಬೀಳುತ್ತದೆ. ಇದನ್ನು ನೋಡಿದ ಅದೇ ಕಟ್ಟಡದ ಕೆಳಗಿದ್ದ ಓರ್ವ ಯುವಕ ಓಡಿ ಬಂದು ಹಿಡಿದಿದ್ದಾರೆ. ಇವರೊಂದಿಗೆ ಮಹಿಳೆ ಕೂಡ ಕೈಜೋಡಿಸಿರುವುದನ್ನು ವಿಡಿಯೋ ತೋರಿಸುತ್ತದೆ.