ಡೈಲಿ ವಾರ್ತೆ : 24 ಸೆಪ್ಟೆಂಬರ್ 2022

ಕೊಡಗು: ಹುಲಿ ದಾಳಿಗೆ ವ್ಯಕ್ತಿ ಬಲಿ

ಮಡಿಕೇರಿ: ಹುಲಿ ದಾಳಿಗೆ ವ್ಯಕ್ತಿಯೋರ್ವ ಸಾವನ್ನಪ್ಪಿರುವ ಘಟನೆ ದಕ್ಷಿಣ ಕೊಡಗಿನ ಕೋತೂರಿನಲ್ಲಿ ನಡೆದಿದೆ.

ಕೋತೂರು ಗ್ರಾಮದ ಬೊಮ್ಮಾಡ ಹಾಡಿ ನಿವಾಸಿ ರಾಜು(52) ಮೃತ ದುರ್ದೈವಿ.



ಶನಿವಾರ ಸಂಜೆ ವೇಳೆ ಘಟನೆ ನಡೆದಿದೆ. ಶುಕ್ರವಾರ ಸಂಜೆ ವೇಳೆ ಸ್ಥಳೀಯರ ಹಸುವಿನ ಮೇಲೆ ಹುಲಿ ದಾಳಿ ಮಾಡಿತ್ತು. ಘಟನಾ ಸ್ಥಳಕ್ಕೆ ಅರಣ್ಯ ಇಲಾಖಾಧಿಕಾರಿಗಳು ಭೇಟಿ ನೀಡಿದರು.