ವರದಿ : ಕುಮಾರ್ ನಾಯ್ಕ್ ಉಪ ಸಂಪಾದಕರು

ಶಿವಮೊಗ್ಗ: ದಿನಕಳದಂತೆ ಶಿವಮೊಗ್ಗ ನಗರ ವೇಗವಾಗಿ ಬೆಳೆಯುತ್ತಿದ್ದು ಇದಕ್ಕೆ ಪೂರಕವಾಗಿ ಸರ್ಕಾರ ಹಾಗೂ ಸರ್ಕಾರಿ ಇಲಾಖೆಕೆಗಳು ಜನರಿಗೆ ಮೂಲ ಭೂತ ಸೌಕರ್ಯಗಳು ವದಗಿಸಬೇಕು ಆದರೆ ಮುಲಾಜಿಲ್ಲದೆ ಜನರಿಂದ ತೆರಿಗೆ ಹಣವನ್ನು ವಸೂಲಿ ಮಾಡುವ ಸರ್ಕಾರ ಜನರನ್ನು ಸಂಪೂರ್ಣವಾಗಿ ಮರೆತಂತೆ ಕಾಣುತ್ತೆ ಇದಕ್ಕೆ ತಾಜಾ ಉದಾಹರಣೆ ಎಂದರೆ ಶಿವಮೊಗ್ಗ ನಗರದಲ್ಲು ನಡೆಯುತ್ತಿರೋ ಸ್ಮಾರ್ಟ್ ಸಿಟಿ ಕಾಮಗಾರಿ.



ಹೌದು ಶಿವಮೊಗ್ಗ ನಗರದಲ್ಲಿ ಅಭಿವೃದ್ದಿ ಮಾಡುತ್ತೇವೆ ಎಂದು ಹೇಳಿ ಸ್ಮಾರ್ಟ್ ಸಿಟಿ ಕಾಮಗಾರಿ ಪ್ರಾರಂಭಿಸಿ ಆಮೇಗತಿಯಲ್ಲಿ ಕಾಮಗಾರಿ ಸಾಗುತ್ತಿದ್ದು ಇದರ ಪರಿಣಾಮ ಸಂಪೂರ್ಣ ಶಿವಮೊಗ್ಗ ನಗರ ಧೂಳಿನಿಂದ ಕೂಡಿದ್ದು ಜನರ ಆರೋಗ್ಯದ ಮೇಲೆ ವೆತಿರಿಕ್ತ ಪರಿಣಾಮ ಬೀರುತ್ತಿದ್ದು ಸರ್ಕಾರ ಹಾಗೂ ಅಧಿಕಾರಿಗಳು ಸಂಪೂರ್ಣವಾಗಿ ಜನರನ್ನ ಮರೆತಂತ್ತೆ ಕಾಣುತ್ತಿದ್ದೆ.

ಸ್ಮಾರ್ಟ್ ಸಿಟಿ ಕಾಮಗಾರಿಯಮೇಲೆ ನಿಗಾವಹಿಸಿ ಕಾಮಗಾರಿಯಿಂದ ಉಂಟಾಗುವ ಮಾಲಿನ್ಯವನ್ನ ತಡೆಯಬೇಕಾಗಿರೋ ಮಾಲಿನ್ಯ ನಿಯಂತ್ರಣ ಮಂಡಳಿಯವರು ಯಾವಕ್ರಮಕ್ಕು ಮುಂದಾಗದೇ ನಿರ್ಲಕ್ಷವಹಿಸಿದ್ದು ಈ ಕಾರಣ ಇಂದು ಶಿವಮೊಗ್ಗ ಜಿಲ್ಲಾ ಆಮ್ ಆದ್ಮಿ ಪಾರ್ಟಿ ವತಿಯಿಂದ ಇಂದು ಮಾಲಿನ್ಯ ನಿಯಂತ್ರಣ ಮಂಡಳಿ ಕಛೇಯ ಮುಂದೆ ಪ್ರತಿಭಟನೆ ನಡೆಸಿ ಮನವಿಯನ್ನು ಸಲ್ಲಿಸಲಾಯಿತ್ತು.