ಡೈಲಿ ವಾರ್ತೆ: 31 ಅಕ್ಟೋಬರ್ 2022

ಕೋಟ: ಯುವಕನೊರ್ವ ನೇಣು ಬಿಗಿದು ಆತ್ಮಹತ್ಯೆ

ಕೋಟ : ಕೋಟ ಹಾಡಿಕೆರೆಬೆಟ್ಟು ಗಿಳಿಯಾರು ಗ್ರಾಮದ ಪ್ರಕಾಶ ಮೊಗವೀರ (35) ವರ್ಷ ಇವರು ಮೀನುಗಾರಿಕೆ ಹಾಗೂ ಪೈಂಟಿಂಗ್ ಕೆಲಸ ಮಾಡಿಕೊಂಡಿದ್ದು , ಸುಮಾರು 10 ವರ್ಷಗಳಿಂದ ವಿಪರೀತ ಮದ್ಯಪಾನ ಮಾಡುವ ಚಟ ಹೊಂದಿದ್ದು ಮದ್ಯ ಸೇವಿಸಿದ ನಂತರ ಈ ಮೊದಲು ಆತ್ಮಹತ್ಯೆಗೂ ಪ್ರಯತ್ನಿಸಿದ್ದರು. ವಿಪರೀತ ಮದ್ಯಪಾನ ಸೇವಿಸಿ ಮನೆಗೆ ಬಂದವರು ಅ.30 ರಂದು ಮಧ್ಯರಾತ್ರಿ ಮನೆಯ ಮಾಡಿಗೆ ನೈಲಾನ್ ಹಗ್ಗದಿಂದ ಕಟ್ಟಿ ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ.
ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.