ಡೈಲಿ ವಾರ್ತೆ: 08 ನವಂಬರ್ 2022

ಕಟ್ಟಡದಿಂದ ಬೀಳುತ್ತಿದ್ದ ಮಗುವನ್ನು ಕೈಯಲ್ಲಿ ಹಿಡಿದು ರಕ್ಷಿಸಿದ ಯುವಕ

ಮಹಡಿಯಿಂದ ನೆಲಕ್ಕೆ ಬೀಳುತ್ತಿದ್ದ ಮಗುವನ್ನು ಯುವಕನೋರ್ವ ಅದ್ಭುತವಾಗಿ ರಕ್ಷಿಸಿದ ಘಟನೆ ದಕ್ಷಿಣ ಚೀನಾದಲ್ಲಿ ನಡೆದಿರುವುದು ವರದಿಯಾಗಿದೆ. ಈ ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ವೀಡಿಯೋದಲ್ಲಿ ರಸ್ತೆಯಲ್ಲಿ ಕಾರನ್ನು ಹತ್ತಲು ವ್ಯಕ್ತಿಯೊಬ್ಬ ತೆರಳುತ್ತಿದ್ದು, ಈ ವೇಳೆ ರಸ್ತೆ ಬದಿಯ ಬೃಹತ್ ಕಟ್ಟಡದ ಎರಡನೇ ಮಹಡಿಯಿಂದ ಮಗು ಆಕಷ್ಮಿಕವಾಗಿ ಬೀಳುತ್ತಿರುವುದು ಕಂಡು ಬರುತ್ತದೆ. ಕಾರು ಹತ್ತುತ್ತಿದ್ದ ಯುವಕ ತಕ್ಷಣವೇ ಓಡಿ ಹೋಗಿ ಮಗು ಬೀಳುವ ಸ್ಥಳದ ಬಳಿ ನಿಂತು ಮಗು ವನ್ನು ಕೈಗಳಲ್ಲಿ ಹಿಡಿದು ಕಾಪಾಡಿದ್ದಾನೆ.