ಡೈಲಿ ವಾರ್ತೆ: 29 ನವಂಬರ್ 2022

ಅಪ್ರಾಪ್ತ ಬಾಲಕಿ ವಾಹನ ಚಲಾಯಿಸಿ ಅಪಘಾತ : ವಾಹನ ಮಾಲಕಿಗೆ 26 ಸಾವಿರ ರೂ ದಂಡ

ಬಂಟ್ವಾಳ: ಅಪ್ರಾಪ್ತ ವಯಸ್ಸಿನ ಬಾಲಕಿಗೆ ವಾಹನ ಚಲಾಯಿಸಲು ನೀಡಿ ಅಪಘಾತ ಸಂಭವಿಸಿದ ಕಾರಣಕ್ಕಾಗಿ ವಾಹನ ಮಾಲಕರಿಗೆ ನ್ಯಾಯಾಲಯ 26 ಸಾವಿರ ರೂ. ದಂಡ ವಿಧಿಸಿದ ಘಟನೆ ಬಂಟ್ವಾಳದಲ್ಲಿ ನಡೆದಿದೆ.

ಸಿದ್ದಕಟ್ಟೆ ಎಂಬಲ್ಲಿ ಸ್ಕೂಟರ್ ಹಾಗೂ ಕಾರಿನ ಮಧ್ಯೆ ಅಪಘಾತ ಸಂಭವಿಸಿ ಸ್ಕೂಟರ್ ಚಲಾಯಿಸುತ್ತಿದ್ದ ಅಪ್ರಾಪ್ತ ಬಾಲಕಿಗೆ ಗಾಯವಾಗಿತ್ತು. ಅಪ್ರಾಪ್ತ ಬಾಲಕಿ ದ್ವಿಚಕ್ರ ವಾಹನ ಚಲಾಯಿಸಿ ಅಪಘಾತ ಸಂಭವಿಸಿದ ಕಾರಣಕ್ಕಾಗಿ ಮೆಲ್ಕಾರ್ ಟ್ರಾಫಿಕ್ ಪೊಲೀಸರು ಸ್ಕೂಟರ್ ಮಾಲಕಿಗೆ ನೋಟಿಸ್ ಜಾರಿ ಮಾಡಿದ್ದರು.

ನ್ಯಾಯಾಲಯ ಬಾಲಕಿಯ ತಾಯಿ ಯಶೋಧ ಅವರಿಗೆ ದಂಡ ಕಟ್ಟುವಂತೆ ನೋಟಿಸ್ ಜಾರಿ ಮಾಡಿದೆ.