ಡೈಲಿ ವಾರ್ತೆ: 29 ನವಂಬರ್ 2022

ಬ್ಯೂಟಿ ಲೇಡಿಯನ್ನು ಮುಂದೆ ಬಿಟ್ಟು ಖತರ್ನಾಕ ಕೆಲಸ ಮಾಡುತ್ತಿದ್ದ ಗ್ಯಾಂಗ್ ನ್ನು ಬಂಧಿಸಿದ ಪೊಲೀಸರು

ರಾಯಚೂರು : ಮನೆ ಮಾಲೀಕರನ್ನೇ ಬಲೆಗೆ ಬೀಳಿಸಿಕೊಂಡು ಕೋಟ್ಯಾಂತರ ಬೆಲೆಬಾಳುವ ಆಭರಣಗಳನ್ನು ದೋಚುತ್ತಿದ್ದ ಖತರ್ನಾಕ್ ಬ್ಯೂಟಿ ಲೇಡಿ ಆ್ಯಂಡ್ ಗ್ಯಾಂಗ್’ನ್ನು ರಾಯಚೂರು ಪೊಲೀಸರು ಬಂಧಿಸಿದ್ದಾರೆ.

ಈ ಪೋಟೋದಲ್ಲಿರುವ ಲೇಡಿಯ ಹೆಸರು ಸುಜಾತಾ ಅಲಿಯಾಸ್ ನಿಹಾರಿಕಾ. ಇಡೀ ಪ್ರಕರಣ ಕಿಂಗ್‌ಪಿನ್ ಈಕೆಯೇ.

ಅಂದಹಾಗೆ ಈಕೆಯ ಹಿಂದಿದೆ ಇಬ್ಬರು ಎಂ ಎಸ್ಸಿ ಪದವೀಧರರು ಸೇರಿ ನಾಲ್ವರ ಗ್ಯಾಂಗ್. ಈ ಗ್ಯಾಂಗ್ ಮೇಲೆ ಆಂಧ್ರದಲ್ಲಿ ಬರೋಬ್ಬರಿ 25 ಕೇಸ್’ಗಳಿವೆ.

ಇನ್ನೂ ತಾವು ಬ್ಯಾಂಕ್ ಸಿಬ್ಬಂದಿ, ಆಫೀಸರ್ ಎಂದು ಸುಳ್ಳು ಹೇಳಿ ಶ್ರೀಮಂತರ ಮನೆಗಳನ್ನೇ ಬಾಡಿಗೆಗೆ ಪಡೆಯುತ್ತಿದ್ದರು. ಮನೆ ಬಾಡಿಗೆ ನೆಪದಲ್ಲಿ ಈಕೆಯನ್ನೇ ಮುಂದೆ ಬಿಟ್ಟು ಸ್ಕೆಚ್ ಹಾಕುತ್ತಿದ್ದರು. ಮನೆಗೆ ಎಂಟ್ರಿ ಕೊಡುತ್ತಿದ್ದ ಈಕೆ ಮೊದಲು ಮನೆ ಮಾಲೀಕರ ಬಳಿ ಸಲುಗೆಯಿಂದ ಮಾತನಾಡುತ್ತಾ ತನ್ನ ಬಲೆಗೆ ಬೀಳಿಸಿಕೊಳ್ಳುತ್ತಿದ್ದಳು. ಆನಂತರ ಆಪ್ತವಾಗಿ ಮಾತಾಡಿ ಎಲ್ಲ ಮಾಹಿತಿಯನ್ನೂ ಕಲೆ ಹಾಕುತ್ತಿದ್ದಳು. ಇವರು ಎಲ್ಲರನ್ನು ಬಲೆಗೆ ಬೀಳಿಸಿಕೊಂಡು ಕೊಟ್ಯಾಂತ‌ರ ರೂಪಾಯಿ ಬೆಲೆಬಾಳುವ ಚಿನ್ನಾಭರಣ ದೋಚಿ ಪರಾರಿಯಾಗಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.