ಡೈಲಿ ವಾರ್ತೆ: 02 ಡಿಸೆಂಬರ್ 2022

ಕೋಟ ವಿವೇಕ ವಿದ್ಯಾ ಸಂಸ್ಥೆಯ ವಿದ್ಯಾರ್ಥಿಗಳು ಸಹ್ಯಾದ್ರಿ ಸೈನ್ಸ್ ಟ್ಯಾಲೆಂಟ್ ಹಂಟ್’ ಸ್ಪರ್ಧೆಯಲ್ಲಿ ಅದ್ಭುತ ಸಾಧನೆ

ಕೋಟ : ಸಹ್ಯಾದ್ರಿ ಮಂಗಳೂರಿನಲ್ಲಿ ನಡೆದ ವಿಜ್ಞಾನ ಮಾದರಿ ಸ್ಪಧೆಯಲ್ಲಿ ವಿವೇಕದ ಅದ್ಭುತ ಸಾಧನೆ ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜ್ ಮಂಗಳೂರು ಇವರು ನಡೆಸಿದ ‘ಸಹ್ಯಾದ್ರಿ ಸೈನ್ಸ್ ಟ್ಯಾಲೆಂಟ್ ಹಂಟ್’ ಸ್ಪರ್ಧೆಯಲ್ಲಿ ಕೋಟ ವಿವೇಕ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿ ಅನೇಕ ಪ್ರಶಸ್ತಿಗಳನ್ನು ಪಡೆದಿರುತ್ತಾರೆ.

ವಿದ್ಯಾರ್ಥಿಗಳಾದ ಅನಿರುದ್ಧ, ಧನುಷ್ ಮತ್ತು ವಿನಾಯಕ ಇವರು ‘ಸಿಎನ್‍ಸಿ ರೈಟಿಂಗ್ ಮೆಷಿನ್’ ಪೆÇ್ರಜೆಕ್ಟ್‍ಗೆ ಪ್ರಥಮ ಸ್ಥಾನವನ್ನು ಪಡೆದಿರುತ್ತಾರೆ.

ಹಾಗೆಯೇ ಶ್ರವಣ, ಮನೀಷ್ ಇವರು ತಯಾರಿಸಿದ
ಮಾದರಿ ‘ಆಕ್ಸಿಡೆಂಟ್ ಡಿಟೆಕ್ಷನ್ ಸಿಸ್ಟಮ್’ಗೆ ತೃತೀಯ ಸ್ಥಾನವನ್ನು ಪಡೆದಿರುತ್ತಾರೆ.

ಉಳಿದಂತೆ ರೋಹಿತ್, ವಿದ್ವತ್ ಪ್ರಥಮ ಸಮಾಧಾನಕರ ಬಹುಮಾನ, ಸೋಹನ್, ವಿನ್ಯಾಸ್ ಕಾರಂತ್ ಮತ್ತು
ಮನ್ವಿತ್ ಇವರಿಗೆ ದ್ವಿತೀಯ ಸಮಾಧಾನಕರ ಬಹುಮಾನ, ಜೀವನ್, ಸುಮುಖ, ಅಕ್ಷಯ ಶಾಸ್ತ್ರೀ, ವಸಂತ ತಂಡಕ್ಕೆ ತೃತೀಯ ಸಮಾಧಾನಕರ ಬಹುಮಾನ ಹಾಗು ಆದರ್ಶ ಮತ್ತು ಶ್ರೇಯಸ್
ಆರಾಧ್ಯ ಇವರಿಗೆ ಚತುರ್ಥ ಸಮಾಧಾನಕರ ಬಹುಮಾನ
ಗಳಿಸಿರುತ್ತಾರೆ. ಇವರೆಲ್ಲರಿಗೂ ಹಾರ್ದಿಕ ಅಭಿನಂದನೆಗಳು