ಡೈಲಿ ವಾರ್ತೆ: 01/ಮೇ /2024
ಮೂಡಬಿದಿರೆಯಲ್ಲಿ ಮೇ 5 ರಂದು “ಕ್ರಿಯೇಟಿವ್ ಪುಸ್ತಕಮನೆ” ಶುಭಾರಂಭ
ಕ್ರಿಯೇಟಿವ್ ಪುಸ್ತಕ ಮನೆ ಮೂಡಬಿದಿರೆಯ ಪಂಚರತ್ನ ಕಟ್ಟಡದಲ್ಲಿ ಮೇ 5ರಂದು ಬೆಳಗ್ಗೆ 10:00 ಗಂಟೆಗೆ ಶುಭಾರಂಭಗೊಳ್ಳಲಿದೆ. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷರಾದ ಡಾ. ಎಂ. ಮೋಹನ್ ಆಳ್ವರು ಹಾಗೂ ಯುವರಾಜ್ ಜೈನ್, ಅಧ್ಯಕ್ಷರು, ಎಕ್ಸಲೆಂಟ್ ಶಿಕ್ಷಣ ಸಮೂಹ ಸಂಸ್ಥೆಗಳು, ಕಲ್ಲಬೆಟ್ಟು ಇವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.
ಈಗಾಗಲೇ ಕಾರ್ಕಳದಲ್ಲಿ ‘ಪುಸ್ತಕ ಮನೆ’ಯು ಪುಸ್ತಕ ಪ್ರೇಮಿಗಳ, ಸಾಹಿತ್ಯಾಸಕ್ತರ ಮನಗೆದ್ದಿದ್ದು ಕರಾವಳಿಯಲ್ಲಿ ಸುಪ್ರಸಿದ್ಧ ಪುಸ್ತಕ ಮಳಿಗೆಯಾಗಿ ಗುರುತಿಸಿಕೊಂಡಿದೆ. ಪುಸ್ತಕ ಪ್ರಕಾಶನವು ಸೇರಿದಂತೆ ‘ಪುಸ್ತಕ ಸಂತೆ’, ಸರಕಾರಿ ಶಾಲಾ ಮಕ್ಕಳಿಗೆ ಉಚಿತವಾಗಿ ಪುಸ್ತಕಗಳನ್ನು ಒದಗಿಸುವ ‘ಪುಸ್ತಕ ಪೋಷಕ ಯೋಜನೆ’, ‘ಮೊಬೈಲ್ ಬಿಡಿ ಪುಸ್ತಕ ಹಿಡಿ’ ಇಂತಹ ಹಲವಾರು ಯೋಜನೆಗಳನ್ನು ಕಾರ್ಯಗತ ಮಾಡಿ ಜನಮಾನಸದಲ್ಲಿ ಗುರುತಿಸಿಕೊಂಡಿದೆ.
ಇದೀಗ ಪುಸ್ತಕ ಮನೆಯ ಎರಡನೇ ಶಾಖೆಯು ಮೂಡಬಿದಿರೆಯಲ್ಲಿ ಶುಭಾರಂಭಗೊಳ್ಳುತ್ತಿದ್ದು, ಪುಸ್ತಕಗಳು ಹಾಗೂ ಎಲ್ಲಾ ರೀತಿಯ ಉಡುಗೊರೆಗಳ ಮೇಲೆ ವಿಶೇಷ ರಿಯಾಯಿತಿ ಇದ್ದು, ಎಲ್ಲರೂ ಇದರ ಪ್ರಯೋಜನವನ್ನು ಪಡೆದುಕೊಳ್ಳಬಹುದು.