ಡೈಲಿ ವಾರ್ತೆ: 02 ಡಿಸೆಂಬರ್ 2022

ಆಮಂತ್ರಣವಿಲ್ಲದ ಮದುವೆಯಲ್ಲಿ ಊಟ ಮಾಡಿದ ಕಾಲೇಜ್ ವಿದ್ಯಾರ್ಥಿಗೆ ಪಾತ್ರೆ ತೊಳೆಯುವಂತೆ ಬಲವಂತ: ವೀಡಿಯೋ ವೈರಲ್

ಮಧ್ಯಪ್ರದೇಶ: ಆಮಂತ್ರಣವಿಲ್ಲದ ಮದುವೆಯಲ್ಲಿ ಊಟ ಮಾಡಿದ ಯುವಕನೊಬ್ಬನ್ನು ಪಾತ್ರೆ ತೊಳೆಯುವಂತೆ ಬಲವಂತ ಮಾಡಿದ ಅಮಾನವೀಯ ಘಟನೆ ಭೋಪಾಲ್’ನಲ್ಲಿ ನಡೆದಿದೆ.


ಭೋಪಾಲ್’ನ ಖಾಸಗಿ ಕಾಲೇಜಿನಲ್ಲಿ ಎಂಬಿಎ ವ್ಯಾಸಂಗ ಮಾಡುತ್ತಿರುವ ಜಬಲ್ಪುರ ಮೂಲದ ವಿದ್ಯಾರ್ಥಿಯಾಗಿರುವ ಈತ ತನ್ನ ಕಾಲೇಜು ಸಮೀಪದಲ್ಲಿ ನಡೆಯುತ್ತಿದ್ದ ಮದುವೆ ಮನೆಗೆ ಹೋಗಿ ಊಟ ಮಾಡಿದ್ದಾನೆ. ಇದನ್ನು ಗಮನಿಸಿದ ಕೆಲವರು ಯುವಕನಿಗೆ ಪಾತ್ರೆ ತೊಳೆಯುವಂತೆ ಬಲವಂತ ಪಡಿಸಿದ್ದಾರೆ.

ಸದ್ಯ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಯುವಕನನ್ನು ಮದುವೆ ಮನೆಯವರು ಗದರಿಸುತ್ತಿರುವುದು ವೀಡಿಯೋದಲ್ಲಿ ಕಾಣಬಹುದಾಗಿದೆ.

ವೀಡಿಯೋ ವೈರಲ್ ಆದ ಬೆನ್ನಲ್ಲೆ ಜನರು ಗಂಡು ಮತ್ತು ಹೆಣ್ಣಿನ ಕಡೆಯವರಿಗೆ ಛೀಮಾರಿ ಹಾಕಿದ್ದು, ಅಮಾನವೀಯ ಕೃತ್ಯ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.