ಡೈಲಿ ವಾರ್ತೆ: 20/ಮೇ /2024
ಸಾಣೂರು: ಮೊಹಿದ್ದೀನ್ ಜುಮ್ಮಾ ಮಸೀದಿಯ ನವೀಕರಣದ ಹೊಸ ಕಟ್ಟಡದ ವಕ್ಫು ಕಾರ್ಯಕ್ರಮ – ಖಾಲಿಯರ್ ಮಾಣಿ ಉಸ್ತಾದ್ ರವರಿಂದ ಲೋಕಾರ್ಪಣೆ
ಸಾಣೂರು: ಮೊಹಿದ್ದೀನ್ ಜುಮ್ಮಾ ಮಸೀದಿ ಇದರ ನವೀಕರಣದ ಹೊಸ ಕಟ್ಟಡ ಇದರ ಮೇಲ್ಚಾವಣಿ ವಕ್ಫು ಕಾರ್ಯಕ್ರಮವು ಮೇ. 20 ರಂದು ಸೋಮವಾರ ಲುಹರ್ ನಮಾಜ್ ನಂತರ ಉಡುಪಿ ಜಿಲ್ಲೆ ಖಾಝಿ ಝೈನುಲ್ ಉಲಮಾ ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ.(ಮಾನಿ ಉಸ್ತಾದ್) ರವರಿಂದ ನೆರವೇರಿತು.
ಸುಮಾರು ಒಂದು ಕೋಟಿಗು ಅಧಿಕ ರೂಪಾಯಿ ಅಂದಾಜು ಖರ್ಚಿನ ಮಸೀದಿ ಆಸಿಫ್ ರವರ ಅಧ್ಯಕ್ಷತೆಯಲ್ಲಿ ಮಾರ್ಹೂಂ ಬೇಕಲ್ ಉಸ್ತಾದ್ ಅವರು ಕೋರೋಣ ಸಂದರ್ಭದಲ್ಲಿ ಶಿಲನ್ಯಾಸ ಮಾಡಿದ್ದರು.
ಆಲ್ ಅಂದುಲಿಲ್ಲ,ಮಾಷಾ ಅಲ್ಲಾಹ್ ಇವತ್ತು ಮೇಲ್ಚಾವಣಿ ಕೆಲಸ ಮುಗಿದಿದೆ, ಕೆಳಗಿನ ಮಸೀದಿಯ ಕೆಲಸ, ಕೆಲ ಛಾವಣಿಯ ಫಿನಿಶಿಂಗ್ ಕೆಲಸಗಳು ಮುಂದುವರೆಯಲಿದೆ.
ಇನ್ಷಾ ಅಲ್ಲಾಹ್ ಆಸೀಫ್ ರವರ ಅವಧಿಯಲ್ಲಿ ಚಿಲನ್ಯಾಸ ಮತ್ತು ಕೆಲ ಅಂತಸ್ತಿನ ಅಡಿಕಲ್ಲು ಇರುವಂತಹ ಮಹಾಭಾಗ್ಯ ಅಲ್ಲಾಹು ಕರುಣಿಸಿದ್ದಾನೆ, ಮಹಾಮಾರಿ ಕೊರೋಣ ಸಂದರ್ಭದಲ್ಲಿ ಮೂರು ವರ್ಷ ನಮ್ಮ ಅಧಿಕಾರ ಮಸೀದಿಯ ಕೆಲಸಕ್ಕೆ ಮಾದರಿಯಾಗಿ.
ಕೆಳ ಅಂತಸ್ತಿನ ಲಿಂಟ್ಟಲ್ವರೆಗೂ
ಕೆಲಸಗಳನ್ನ ಮಾಡಿ, ಕೆಲಸ ಕಾರ್ಯಗಳನ್ನು ಮುಗಿಸಿ, ನಮ್ಮ ಅವಧಿ ಮುಗಿಸಿದ್ದೆವು.
ನಂತರ ಅಧ್ಯಕ್ಷರಾಗಿ ಅಧಿಕಾರಕ್ಕೇ ಬಂದವರು
ನನ್ನ ಆತ್ಮೀಯರು ಐಡಿಯಲ್ ಅಬ್ದುಲ್ ರಹಮಾನ್ ರವರ ಮೂಲಕ ಕೆಲಸ ಕಾರ್ಯಗಳು, ಸುಗಮವಾಗಿ, ಸಾರ್ವಜನಿಕರು ಹಾಗೂ ಊರಿನ ಸರ್ವರ ಸಹಕಾರದಿಂದ ಮುಂದುವರಿಯುತ್ತಿದೆ.
ಅಲ್ ಹಂದುಲಿಲ್ಲ ಮನಸ್ಸಿಗೆ ಬಹಲ ಸಂತೋಷ ಅಲ್ಲಾಹ್ ನಾ ಭವನ ನಿರ್ಮಾಣಕ್ಕೆ ಅವಕಾಶ ಸಿಕ್ಕಿದ್ದು ಅಲ್ಲಾಹನಿಗೆ ಸರ್ವಸ್ತುತಿ.
ಈಗಾಗಲೇ 70 ರಿಂದ 75 ಲಕ್ಷ ತನಕ ಖರ್ಚಾಗಿದೆ ಇನ್ನೂ 40 ಲಕ್ಷ ರೂಪಾಯಿ ಅಗತ್ಯವಿದೆ ಎಂದು ಅಂದಾಜಿಸಲಾಗಿದೆ. ಅಲ್ಲಾಹನು ನೆರವೇರಿಸಿಕೊಡಲಿ ಎಂದು ಪ್ರಾರ್ಥಿಸೋಣ, ಆಮೀನ್