ಡೈಲಿ ವಾರ್ತೆ:09 ಜನವರಿ 2023

ನಜಾತ್ ಕ್ರಿಕೆಟರ್ಸ್ ಕೋಟ ಪಡುಕರೆ ಇವರ ಆಶ್ರಯದಲ್ಲಿ ‘ಸುಲ್ತಾನ್ ಟ್ರೋಫಿ 2022’

ಕೋಟ: ಕೋಟತಟ್ಟು ಪಡುಕರೆ ನಜಾತ್ ಕ್ರಿಕೆಟರ್ಸ್ ಆಯೋಜಿಸಿದ ನಜಾತ್ ಪ್ರೀಮಿಯರ್ ಲೀಗ್
“ಸುಲ್ತಾನ್ ಟ್ರೋಫಿ 2022” ದಿನಾಂಕ 8 ರಂದು ಭಾನುವಾರ ಬೆಳಿಗ್ಗೆ ಎಚ್. ಎಮ್. ಸ್ಟೋರ್ ಸಮೀಪ ನಡೆಯಿತು.
ಈ ಪಂದ್ಯಾಟದ ಉದ್ಘಾಟನೆಯನ್ನು ಎಂ. ಜೆ. ಎಂ. ಕೋಡಿಕನ್ಯಾಣದ ಅಧ್ಯಕ್ಷ ಇಸ್ಮಾಯಿಲ್ ಬಿ.ಕೆ. ಅವರು ಬೌಲಿಂಗ್ ಮಾಡಿ ಉದ್ಘಾಟಿಸಿ ಎಲ್ಲರಿಗೂ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಎಂ. ಜೆ. ಎಂ. ಮಾಜಿ ಅಧ್ಯಕ್ಷ ಮೂಸಾ ಬ್ಯಾರಿ, ಹಿದಾಯತುಲ್ ಅರಬಿಕ್ ಸ್ಕೂಲ್ ಕೋಟ ಪಡುಕರೆ ಇದರ ಅಧ್ಯಕ್ಷ ಹಸೈನಾರ್ ಕೆ. ಎಚ್., ಕಾರ್ಯದರ್ಶಿ ಹುಸೇನ್ ಕೆ. ಎಚ್., ಡೈಲಿ ವಾರ್ತೆ ಸಂಪಾದಕ ಇಬ್ರಾಹಿಂ ಕೋಟ, ನಜಾತ್ ಯಂಗ್ ಮನ್ಸ್ ಉಪಾಧ್ಯಕ್ಷ ಸಾದಿಕ್, ದಾವೂದ್ ಬಿ. ಕೆ., ಅಬ್ದುಲ್ ರಹಿಮಾನ್, ಮುಯ್ದಿನ್ ಬ್ಯಾರಿ, ನಾಸಿರ್ ಕೋಡಿ, ಅಬ್ಬಾಸ್, ಹನೀಫ್ ಮಧುವನ, ಸಾದಿಕ್ ಮಲ್ಪೆ, ಮೊಹಮ್ಮದ್ ಎ., ಫಾರೂಕ್, ರಝಕ್, ಕಬೀರ್ ಮೂಡುಬಿದ್ರೆ, ಬಶೀರ್, ಸುಲೇಮಾನ್ ರಿಕ್ಷಾ, ಶರೀಫ್ ಎಚ್. ಎಂ. ಅಶ್ರಫ್ ಎಸ್., ಆಜೀದ್ ಎಸ್., ಸಲೀಮ್, ನಝಿರ್, ರಿಯಾಜ್ ಇಕ್ಬಾಲ್, ಇಸಾಕ್ ಬಿಕೆ, ಮೊದಲದವರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ನಜಾತ್ ಕ್ರಿಕೆಟರ್ಸ್ ನ ಕೆ. ಎಂ. ಇಮ್ರಾನ್ ಸ್ವಾಗತಿಸಿ ವಂದಿಸಿದರು.