ಡೈಲಿ ವಾರ್ತೆ:21 ಜನವರಿ 2023
ಅಂಕೋಲಾ : ಜನರಿಗೆ ವಂಚಿಸಿ ಬೈಕ್ ಕಳ್ಳತನ ಮಾಡುತ್ತಿದ್ದ ಖತರ್ನಾಕ್ ಕಳ್ಳನ ಬಂಧನ
ಅಂಕೋಲಾ : ರಾಜ್ಯದ ಹಲವು ಜಿಲ್ಲೆಗಳಲ್ಲಿ ಸಿನೀಮೀಯ ರೀತಿಯಲ್ಲಿ ತನ್ನ ಚಾಲಕಿ ಬುದ್ದಿಯಿಂದ ಬೈಕ್ ಎರಗಿಸಿ ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಅಂಕೋಲಾ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕಳೆದ ತಿಂಗಳು ತಾಲೂಕಿನ ಮಂಜುಗುಣಿಯ ಯುವಕನನ್ನು ಬಾಳೆಗುಳಿ ಬೈಕ್ ಶೋ ರೂಮ್ ಎದುರು ಯಾಮಾರಿಸಿ ಆತನ ಕೆಟಿಎಮ್ ಬೈಕ್ ಎಗರಿಸಿದ್ದ. ನಾನು ಇಂತಹ ಬೈಕ್ ಖರೀದಿ ಮಾಡಲು ಬಯಸಿದ್ದು ನಿನ್ನ ಬೈಕ್ ಒಂದು ಟೆಸ್ಟ್ ರೈಡ್ ಕೊಡು ಎಂದು ಸುಳ್ಳು ಹೇಳಿ ಬೈಕ್ ಏರಿ ನಾಪತ್ತೆಯಾಗಿದ್ದ. ಬೈಕ್ ಪಡೆದು ಹೊದ ಆತ ಮರಳಿ ಬಾರದೆ ಇರುವುದನ್ನು ಗಮನಿಸಿ ಅಂಕೋಲಾ ಪೊಲೀಸ್ ಠಾಣೆಗೆ ಘಟನೆ ಕುರಿತಂತೆ ದೂರು ನೀಡಿದ್ದ . ಇಲ್ಲಿಯ ದೃಶ್ಯಾವಳಿಗಳು ಬೈಕ್ ಶೋ ರೂಮಿನ ಸಿ.ಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಬಳಿಕ ಕಾರ್ಯಪ್ರರ್ವತ್ತರಾದ ಅಂಕೋಲಾ ಪೊಲೀಸರು ಹಾವೇರಿ ಮೂಲದ ಅರಾಫತ್ ಅತ್ತರ್ (30) ಎನ್ನುವನನ್ನು ಬಂಧಿಸಿದ್ದಾರೆ.
ಈತನು ಬೆಳ್ತಂಗಡಿ, ಹೊನ್ನಾವರದ ಉಪ್ಪೋಣಿ ಭಾಗಗಳಲ್ಲಿ ವಾಸವಾಗಿದ್ದುಕೊಂಡು ಕಳೆದ ಕೆಲವು ವರ್ಷಗಳಿಂದ ಕಟ್ಟಡ (ಸೆಂಟ್ರಿಗ್ – ಟೈಲ್ ಫಿಟಿಂಗ್ ನಂತಹ ) ಕೆಲಸ ಮಾಡಿ ಕೊಂಡಿದ್ದ ಎನ್ನಲಾಗಿದ್ದು ತನ್ನ ಮೋಜು ಮಸ್ತಿಯ ಜೀವನಕ್ಕಾಗಿ ಬೈಕ್ ಕಳ್ಳತನ, ಮೊಬೈಲ್ ಕಳ್ಳತನದಂತಹ ಅಡ್ಡಕಸುಬಿಗೆ ಇಳಿದಿದ್ದ ಎನ್ನಲಾಗಿದೆ.
ಈತ ಮಾಡವ ಕಳ್ಳತನ ಪ್ರಕರಣ ಭಾರಿ ಚಾಲಾಕಿತನದಿಂದ ಮಾಡುತ್ತಿದ್ದು ಪೊಲೀಸರಿಗು ತಲೆನೋವಾಗಿ ಪರಿಣಮಿಸಿತ್ತು. ಈ ಕುರಿತು ಪೊಲೀಸರು ತನಿಖೆ ಮುಂದುವರಿಸಿರುವಾಗಲೇ ಅಂಕೋಲಾದಲ್ಲಿ ಕದ್ದ ಡ್ಯೂಕ್ ಬೈಕ್ ಚಿಕ್ಕಮಂಗಳೂರಿನಲ್ಲಿ ಪತ್ತೆಯಾಯಿತಾದರೂ, ಕಳ್ಳನ ಕರಾಮತ್ತಿನಿಂದ ಇಲ್ಲಿಯೂ ಪೊಲೀಸರು ತಲೆಕೆರೆದುಕೊಳ್ಳುವಂತೆ ಮಾಡಿತ್ತು.
ಚಿಕ್ಕಮಂಗಳೂರಿಗೆ ಬಂದಿದ್ದ ಆಂಧ್ರ ಮೂಲದ ಪ್ರವಾಸಿಗರಿಗೆ ಅಂಕೋಲಾದಲ್ಲಿ ಕಳ್ಳತನ ನಡೆಸಿದ ಮಾದರಿಯಲ್ಲಿಯೇ ನಂಬಿಸಿ, ಅವರಿಂದ ಹಿರೋ ಪಲ್ಸ್ ಬೈಕ್ ಪಡೆದಿದ್ದ ಕಿಲಾಡಿ ಕಳ್ಳ, ಅನುಮಾನ ಬಾರದಂತೆ ತಾನು ಕದ್ದು ತಂದಿದ್ದ ಡ್ಯೂಕ್ ಬೈಕ್ ಅಲ್ಲಿಯೇ ಬಿಟ್ಟು ಮತ್ತೆ ಪರಾರಿಯಾಗಿದ್ದ. ಅಲ್ಲಿಯ ಪೊಲೀಸ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿ ಅಂಕೋಲಾ ಕೆಟಿಎಂ ಬೈಕ್ ಸಿಕ್ಕಿತ್ತಾದರು ಅಲ್ಲಿ ಇನ್ನೊಂದು ಬೈಕ್ ಎರಗಿಸಿದ್ದ,ಬಳಿಕ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಸಿಪಿಐ ಸಂತೋಷ ಶೆಟ್ಟಿ ನೇತ್ರತ್ವದ ಅಂಕೋಲಾ ಪಿಎಸೈ ಪ್ರೇಮನಗೌಡ ಪಾಟೀಲ್ ತಂಡ ಖತರನಾಕ ಕಳ್ಳನನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾದರು. ಅಲ್ಲಿಯು ಆಂಧ್ರ ನೋಂದಣಿ ಹೊಂದಿದ ಇನ್ನೊಂದು ಕಳ್ಳತನ ಮಾಡಿದ ಬೈಕನ್ನು ವಶಕ್ಕೆ ಪಡೆದಿದ್ದಾರೆ.
ಈತನು ರಾಜ್ಯದ ಅನೇಕ ಕಡೆ ಚಿತ್ರದುರ್ಗ, ಹುಬ್ಬಳ್ಳಿ, ಅಂಕೋಲಾ, ಕೊಪ್ಪಳ, ಕಾಕತಿ ಹಾಗೂ ಚಿಕ್ಕ ಮಂಗಳೂರು ಬಾಗದಲ್ಲಿ ಕಳ್ಳತನ ಮಾಡಿರುವ ಪ್ರಕರನ ಬೆಳಕಿಗೆ ಬಂದಿದೆ. ಖತರ್ನಾಕ ಕಳ್ಳನನ್ನು ಹಡೆಮುರಿ ಕಟ್ಟಿದ ಅಂಕೋಲಾ ಪೊಲೀಸರ ಈ ಕಾರ್ಯಕ್ಕೆ ಎಲ್ಲೇಡೆ ಮೆಚ್ಚುಗೆ ವ್ಯಕ್ತವಾಗಿದೆ.