



ಡೈಲಿ ವಾರ್ತೆ: 28 ಜನವರಿ 2023


ಕಟ್ಟಡ ಉರುಳಿ ಬಿದ್ದು ಮಹಿಳಾ ಟೆಕ್ಕಿ ಮೃತ್ಯು
ಚೆನ್ನೈ: ಕಟ್ಟಡ ಉರುಳಿ ಬಿದ್ದ ಪರಿಣಾಮ ಮಹಿಳಾ ಟೆಕ್ಕಿಯೊಬ್ಬರು ಮೃತಪಟ್ಟಿರುವ ಘಟನೆ ಚೆನ್ನೈನ ಥೌಸಂಡ್ ಲೈಟ್ಸ್ ಪ್ರದೇಶದಲ್ಲಿ ನಡೆದಿದೆ.
ಪದ್ಮ ಪ್ರಿಯಾ (22) ಮೃತಪಟ್ಟವರು ಎಂದು ಗುರುತಿಸಲಾಗಿದೆ. ಮಧುರೈ ನಿವಾಸಿಯಾಗಿರುವ ಈಕೆ ಸಾಫ್ಟ್ ವೇರ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು.
ಪದ್ಮಪ್ರಿಯ ಅವರು ತನ್ನ ಗೆಳತಿಯ ಜೊತೆಗೆ ಮೆಟ್ರೋ ಸ್ಟೇಷನ್ ಕಡೆ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ಕಟ್ಟಡ ಏಕಾಏಕಿ ಇವರ ಮೇಲೆ ಬಿದ್ದಿದೆ. ಕೂಡಲೇ ಸ್ಥಳೀಯರು ಅವರನ್ನು ರಕ್ಷಣೆ ಮಾಡಲು ಪ್ರಯತ್ನಿಸಿದ್ದಾರೆ. ನಂತರ ಕಟ್ಟಡದ ಅವಶೇಷಗಳಡಿಯಿಂದ ಹೊರತೆಗೆದು ಅಂಬುಲೆನ್ಸ್ ಮೂಲಕ ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಿದರು. ಆದರೆ ಪದ್ಮ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.