ಡೈಲಿ ವಾರ್ತೆ:10 ಫೆಬ್ರವರಿ 2023
‘ಹಸು ಅಪ್ಪುಗೆಯ ದಿನ’ ಮನವಿ ಹಿಂಪಡೆದ ಪ್ರಾಣಿ ಕಲ್ಯಾಣ ಮಂಡಳಿ
ನವದೆಹಲಿ : ಫೆಬ್ರವರಿ 14 ರಂದು ‘ಹಸು ಅಪ್ಪುಗೆಯ ದಿನ’ವನ್ನಾಗಿ ಆಚರಿಸುವ ಮನವಿಯನ್ನು ಸರಕಾರದ ನಿರ್ದೇಶನದ ಮೇರೆಗೆ ಹಿಂಪಡೆದಿರುವುದಾಗಿ ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿ (AWBI) ಶುಕ್ರವಾರ ತಿಳಿಸಿದೆ.
ಫೆಬ್ರವರಿ 14 ರಂದು ಪ್ರಪಂಚದಾದ್ಯಂತ ವ್ಯಾಲೆಂಟೈನ್ಸ್ ಡೇ (ಪ್ರೇಮಿಗಳ ದಿನ) ಎಂದು ಆಚರಿಸಲಾಗುತ್ತದೆ.
ಸಕ್ಷಮ ಪ್ರಾಧಿಕಾರ ಮತ್ತು ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವಾಲಯದ ನಿರ್ದೇಶನದಂತೆ, 14 ಫೆಬ್ರವರಿ 2023 ರಂದು ಹಸುವಿನ ಅಪ್ಪುಗೆಯ ದಿನ ಆಚರಿಸಲು ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿಯು ಹೊರಡಿಸಿದ ಮನವಿಯನ್ನು ಹಿಂಪಡೆಯಲಾಗಿದೆ” ಎಂದು ಮಂಡಳಿಯ ಕಾರ್ಯದರ್ಶಿ ಎಸ್.ಕೆ.ದತ್ತಾ ತಿಳಿಸಿದ್ದಾರೆ.
ಮೊದಲ ಬಾರಿಗೆ AWBI ದೇಶದ ಗೋ ಪ್ರೇಮಿಗಳಿಗೆ ‘ಕೌ ಹಗ್ ಡೇ’ ಆಚರಿಸುವಂತೆ ಮನವಿ ಮಾಡಿತ್ತು. ಈ ಕುರಿತು ವ್ಯಾಪಕ ಟೀಕೆಯೂ ವ್ಯಕ್ತವಾಗಿತ್ತು.