ಡೈಲಿ ವಾರ್ತೆ:13 ಫೆಬ್ರವರಿ 2023

ವರದಿ. ಮಲ್ಲಿಕಾಜು೯ನ ಅಲ್ಲಾಪೂರ ಸಿಂದಗಿ

ಸಿಂದಗಿ: ಗಾಳಿಯಲ್ಲಿ ಗುಂಡು ಹಾರಿಸಿ ಭಯ ಸೃಷ್ಟಿಸಿದ 5 ಜನ ದುಷ್ಕರ್ಮಿಗಳು, ಇಬ್ಬರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ ಸ್ಥಳೀಯರು

ಸಿಂದಗಿ : ಪಟ್ಟಣದ ಚಾಮುಂಡೇಶ್ವರಿ ಜ್ಯುವೆಲ್ಲರ್ಸ್ ಅಂಗಡಿಯ ಬಳಿ ಇಂದು ಸಂಜೆ 7 ಗಂಟೆಯ ವೇಳೆಗೆ ನಂಬರ್ ಪ್ಲೇಟ್ ಇಲ್ಲದ ಎರಡು ಬೈಕ್ ಮೇಲೆ ಬಂದ 5 ಜನ ದುಷ್ಕರ್ಮಿಗಳಲ್ಲಿ ಓರ್ವ ಗಾಳಿಯಲ್ಲಿ ಗುಂಡು ಹಾರಿಸಿ ಭಯದ ಸೃಷ್ಟಿಸಿದ ಘಟನೆ ನಡೆದಿದೆ. ಗಾಳಿಯಲ್ಲಿ ಗುಂಡು ಹಾರಿಸಿದ ಕೂಡಲೇ ಜನ ಜಾಮಾಯಿಸಿ ಅವರನ್ನು ಹಿಡಿಯಲು ಹೋದಾಗ ದುಷ್ಕರ್ಮಿಗಳು ತಮ್ಮ ಬ್ಯಾಗಿನಲ್ಲಿ ಇದ್ದ ಮಚ್ಚನ್ನು ತೋರಿಸಿ ತಪ್ಪಿಸಿಕೊಳ್ಳಲು ಪ್ರಯತ್ನ ಪಟ್ಟಿದ್ದಾರೆ ಇಷ್ಟಾದರೂ ಬಿಡದ ಸ್ಥಳೀಯರು ಐದು ಜನರಲ್ಲಿ ಇಬ್ಬರು ವ್ಯಕ್ತಿಗಳನ್ನು ಮೋರಟಗಿ ನಾಕಾ ಸೇದು ಬಾವಿಯ ಬಳಿ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ . ಸ್ಥಳಕ್ಕೆ ಆಗಮಿಸಿದ ಪೊಲೀಸರು ಇಬ್ಬರು ವ್ಯಕ್ತಿಗಳ ಸಹಿತ 1 ನಾಡ ಬಂದೂಕು , 2 ಮಚ್ಚು 2 ಜೀವಂತ ಗುಂಡು, 2 ಬೈಕ್ ವಶಕ್ಕೆ ಪಡೆದಿದ್ದಾರೆ.