ಡೈಲಿ ವಾರ್ತೆ:13 ಫೆಬ್ರವರಿ 2023

ಅಲ್ಲಿಪಾದೆ : ನವೀಕೃತ ಸಂತ ಅಂತೋನಿ ಚರ್ಚ್‌ ಹಾಗೂ ನೂತನ ಗುರು ನಿವಾಸದ ಉದ್ಘಾಟನೆ ಹಾಗೂ ಆಶೀರ್ವಚನ ಸಂಭ್ರಮ

ಬಂಟ್ವಾಳ :ತಾಲೂಕಿನ ಸರಪಾಡಿ ಗ್ರಾಮದ ಅಲ್ಲಿಪಾದೆಯಲ್ಲಿ ನವೀಕೃತಗೊಂಡ ಸಂತ ಅಂತೋನಿ ಚರ್ಚ್‌ ಹಾಗೂ ನೂತನ ಗುರು ನಿವಾಸದ ಉದ್ಘಾಟನೆ ಹಾಗೂ ಆಶೀರ್ವಚನ ಸಂಭ್ರಮ ಕಾರ್ಯಕ್ರಮ ಸೋಮವಾರ ನಡೆಯಿತು.

ಮಂಗಳೂರು ಕ್ರೈಸ್ತ ಧರ್ಮ ಪ್ರಾಂತ್ಯದ ಧರ್ಮಾಧ್ಯಕ್ಷ ಅತೀ ವಂದನೀಯ ಡಾ.ಪೀಟರ್ ಪಾವ್ಲ್ ಸಲ್ಡಾನ್ಹಾ ನವೀಕೃತ ದೇವಾಲಯವನ್ನು ಲೋಕಾರ್ಪಣೆಗೊಳಿಸಿದರು.
ಬಳಿಕ ನಡೆದ ಸಭಾಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ದೇವರ ಆಶೀರ್ವಾದದಲ್ಲಿ ಹಾಗೂ ಸರ್ವ ಜನರ ಸಹಕಾರದಲ್ಲಿ ಸುಂದರವಾದ ದೇವಾಲಯ ಹಾಗೂ ಗುರು ನಿವಾಸ ನಿರ್ಮಾಣಗೊಂಡು ಲೋಕಾರ್ಪಣೆಗೊಳಿಸಿರುವುದು ಸಂತಸ ತಂದಿದೆ ಎಂದರು.


ಮಾಜಿ ಸಚಿವ ಬಿ.ರಮಾನಾಥ ರೈ, ಕ್ಯಾಲಿಕಟ್ ಧರ್ಮ ಪ್ರಾಂತ್ಯದ ಶ್ರೇಷ್ಠ ಧರ್ಮಗುರು ವಂ.ಫಾ. ಮೊನ್ಸಿಂಜೋರ್, ಡಾ.ಜೆನ್ಸನ್ ಪುತ್ತನ್ ವಿತ್ತಿಲ್, ಬಂಟ್ವಾಳ ವಲಯ ಪ್ರಧಾನ ಧರ್ಮಗುರು ಫಾ. ವಲೇರಿಯನ್ ಡಿಸೋಜ, ಕ್ಲೂನಿ ಸಿಸ್ಟರ್ಸ್ ಆಫ್ ಸೈಂಟ್ ಜೋಸೆಫ್ ಪ್ರೊವಿನ್ಶಿಯಲ್ ಸುಪಿರೀಯರ್ ವಂ.ಧರ್ಮ ಭಗಿನಿ ಅನ್ನೀಸ್ ಕಲ್ಲರಕಲ್, ಕ್ಲೂನಿ ಕಾನ್ವೆಂಟ್ ಅಲ್ಲಿಪಾದೆ ಸುಪಿರೀಯರ್ ವಂ.ಧರ್ಮಭಗಿನಿ ನರ್ಸಿಜಾ ಸಿಕ್ವೇರಾ, ಚರ್ಚ್ ಪಾಲನಾ ಮಂಡಳಿ ಕಾರ್ಯದರ್ಶಿ ಕಿರಣ್ ನೊರೊನ್ಹಾ, ಸಂಯೋಜಕ ಲಾರೆನ್ಸ್ ಡಿಸೋಜ, ಆರ್ಥಿಕ ಸಮಿತಿ ಸದಸ್ಯ ಲಿಯೋ ಫೆರ್ನಾಡೀಸ್ ಉಪಸ್ಥಿತರಿದ್ದರು.

ಇದೇ ವೇಳೆ ಆಚರ್ಯೆಂ ಸ್ಮರಣ ಸಂಚಿಕೆಯನ್ನು ಬಿಡುಗಡೆ ಗೊಳಿಸಲಾಯಿತು. ಕಟ್ಟಡ ನಿರ್ಮಾಣದಲ್ಲಿ ಸಹಕರಿಸಿದ ದಾನಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.

ಅಲ್ಲಿಪಾದೆ ಚರ್ಚ್‌ನ ಧರ್ಮಗುರು ಫಾ.ಫ್ರೆಡ್ರಿಕ್ ಮೊಂತೇರೊ ಪ್ರಸ್ತಾವಿಸಿ, ಸ್ವಾಗತಿಸಿದರು. ಚರ್ಚ್ ಪಾಲನಾ ಮಂಡಳಿ ಉಪಾಧ್ಯಕ್ಷ ನವೀನ್ ಮೋರಾಸ್ ವಂದಿಸಿದರು
ಫಾ. ರೂಪೇಶ್ ತಾವ್ರೋ ಹಾಗೂ ಮಧುವೆನೆಸ್ಸಾ ಮೋರಸ್ ಕಾರ್ಯಕ್ರಮ ನಿರೂಪಿಸಿದರು.