ಡೈಲಿ ವಾರ್ತೆ:21 ಫೆಬ್ರವರಿ 2023

ಮಲ್ಯಾಡಿ: ದ್ವಿಚಕ್ರ ಸವಾರನಿಗೆ ಟಿಪ್ಪರ್ ಡಿಕ್ಕಿ: ಸವಾರ ಗಂಭೀರ ಗಾಯ

ಕೋಟ: ತೆಕ್ಕಟ್ಟೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಲ್ಯಾಡಿ ಸಮೀಪ ದ್ವಿಚಕ್ರ ವಾಹನ ಹಾಗೂ ಟಿಪ್ಪರ್ ನಡುವೆ ನಡೆದ ಅಪಘಾತದಲ್ಲಿ ದ್ವಿಚಕ್ರ ಸವಾರ ಗಂಭೀರ ಗಾಯಗೊಂಡ ಘಟನೆ ಮಂಗಳವಾರ ಸಂಜೆ ನಡೆಯಿತು.

ದ್ವಿಚಕ್ರ ಸವಾರ ಕನ್ನುಕೆರೆ ಫಯೀಮ್ (31) ಎಂದು ಗುರುತಿಸಲಾಗಿದೆ.

ಮಲ್ಯಾಡಿಯಿಂದ ತೆಕ್ಕಟ್ಟೆ ಕಡೆಗೆ ಬರುತ್ತಿದ್ದ ದ್ವಿಚಕ್ರ ಸವಾರನಿಗೆ ತೆಕ್ಕಟ್ಟೆಯಿಂದ ಮಲ್ಯಾಡಿ ಕಡೆ ಹೋಗುವ ಟಿಪ್ಪರ್ ಮುಖಾಮುಖಿ ಡಿಕ್ಕಿ ಹೊಡೆದಿದ್ದು ದ್ವಿಚಕ್ರ ವಾಹನ ಸವಾರ ಗಂಭೀರ ಗಾಯ ಗೊಂಡಿದ್ದಾರೆ. ಆತನನ್ನು ತಕ್ಷಣ ತೆಕ್ಕಟ್ಟೆ ಫ್ರೆಂಡ್ಸ್ ಆಂಬುಲೆನ್ಸ್ ನಲ್ಲಿ ಕುಂದಾಪುರ ಖಾಸಗಿ ಆಸ್ಪತ್ರೆಗೆ ಕರೆದೊಯಿದರು.
ಟಿಪ್ಪರ್ ಚಾಲಕನ ಅತಿವೇಗ ಹಾಗೂ ಅಜಾಗ್ರತೆಯಿಂದ ಈ ಅಪಘಾತ ನೆಡೆದಿದೆ ಎಂದುತಿಳಿದುಬಂದಿದೆ.
ಕೋಟ ಪೊಲೀಸರು ಸ್ಥಳಕಾಗಮಿಸಿ ಪರಿಶೀಲಿಸಿ ಪ್ರಕರಣ ದಾಖಲಿಸಿದ್ದಾರೆ.