ಡೈಲಿ ವಾರ್ತೆ:21 ಫೆಬ್ರವರಿ 2023
400 ವರುಷಗಳ ಇತಿಹಾಸ ಇರುವ ಕರಗುಡಿ ಶ್ರೀ ವರಬ್ರಹ್ಮ, ಶ್ರೀ ಸ್ವರ್ಣ ಯಕ್ಷಿ ಮತ್ತು ನಾಗ ದೇವತೆ ಸ-ಪರಿವಾರ ದೇವರುಗಳ ವಾರ್ಷಿಕ ಜಾತ್ರಾ ಮಹೋತ್ಸವ.!
ಡೈಲಿ ವಾರ್ತೆ:21 ಫೆಬ್ರವರಿ 2023
– ಕೆ.ಸಂತೋಷ್ ಶೆಟ್ಟಿ ಮೊಳಹಳ್ಳಿ, ಕುಂದಾಪುರ, ಉಡುಪಿ ಜಿಲ್ಲೆ. (ಪತ್ರಕರ್ತರು & ಮಾಧ್ಯಮ ವಿಶ್ಲೇಷಕರು)
ಸುದ್ದಿ @ ಮೊಳಹಳ್ಳಿ: ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಮೊಳಹಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ, ಸರಿ ಸುಮಾರು 400 ವರ್ಷಗಳ ಇತಿಹಾಸಿಯಾಗಿರುವ ಐತಿಹಾಸಿಕ ಪುರಾಣ ಪ್ರಸಿದ್ಧ ಮೊಳಹಳ್ಳಿ ಕರಗುಡಿ ಶ್ರೀ ವರಬ್ರಹ್ಮ, ಶ್ರೀ ಸ್ವರ್ಣ ಯಕ್ಷಿ, ನಾಗದೇವತೆ ಸಹ ಪರಿವಾರ ಗಣಗಳ ವಾರ್ಷಿಕ ಜಾತ್ರಾ ಮಹೋತ್ಸವ (ಹಾಲು ಹಬ್ಬ ಸೇವೆ) ಕಲಾ ಹೋಮ, ಮಹಾ ಅನ್ನ ಸಂತರ್ಪಣೆ , ಗಂಡಸೇವೆ , ಡಮರುಗ ಸೇವೆ.., ಇದೇ ಬರುವ ಫೆಬ್ರವರಿ 28/02/2023 ಮಂಗಳವಾರ ಮತ್ತು ಮಾರ್ಚ್- 01/03 /2023 ಬುಧವಾರ ವರೆಗೂ ಧಾರ್ಮಿಕ ವಿವಿಧ ಕಾರ್ಯಕ್ರಮಗಳು ಜರುಗಲಿದೆ. ಕಾರ್ಯಕ್ರಮದಲ್ಲಿ ಅರ್ಚಕರೊಂದದವರು ವಿಶೇಷವಾದಂತಹ ಕಲಾ ಹೋಮ ಸೇವೆ ಮತ್ತು ವಿಶೇಷ ಪೂಜಾ ವಿಧಿ, ವಿಧಾನವನ್ನು ಶ್ರೀಧರ್ ಉಡುಪರು ಮತ್ತು ಶಿವರಾಮ ಉಡುಪರ ಮುಂದಾಳತ್ವದಲ್ಲಿ ದಲ್ಲಿ ಜರುಗಲಿದೆ.
ಧಾರ್ಮಿಕ ಕಾರ್ಯಕ್ರಮಗಳು 28.02.2023ನೇ ಮಂಗಳವಾರ ಬೆಳಿಗ್ಗೆ – ಶ್ರೀ ವರಬ್ರಹ್ಮ ಮತ್ತು ನಾಗದೇವತೆಗೆ ಕಲಾ ಹೋಮ ಸೇವೆ, ಹಾಗೂ ಅದೇ ದಿನ ಸಂಜೆ 4 ಗಂಟೆಗೆ ಸರಿಯಾಗಿ – ಶ್ರೀ ಸ್ವರ್ಣ ಯಕ್ಷಿ ಮತ್ತು ಸಹ ಪರಿವಾರ ಗಣಗಳಿಗೆ ಕಲಾ ಹೋಮ ಸೇವೆ ಜರಗುತ್ತದೆ. ಹಾಗೂ ಜಾತ್ರಾ ಪ್ರಯುಕ್ತ ವಿಶೇಷ ಪೂಜಾ ಕಾರ್ಯಕ್ರಮಗಳು ಜರುಗಲಿದೆ. ಅದಲ್ಲದೆ ಶ್ರೀ ಯಕ್ಷಮ್ಮ ದೇಗುಲಕ್ಕೆ ಹರಿಕೆ ರೂಪದಲ್ಲಿ, ಸನ್ನಿಧಾನಕ್ಕೆ ನೀಡಿದಂತಹ ಪ್ರಕಾರ, ಅಂತಹ ಮಹಾ ಭಕ್ತ ಅಭಿಮಾನಿಗಳನ್ನ ಗಣ್ಯರ ಸಮ್ಮುಖದಲ್ಲಿ ಅಭಿನಂದಿಸಲಾಗುತ್ತದೆ. ವರ್ಷಂ ಪ್ರತಿ ಅನ್ನದಾನ ನೀಡಿದ ಸೇವೆ ಕರ್ತರಿಗೆ ಹಾಗೂ ಹೂವಿನ ಅಲಂಕಾರ ಮಾಡಿದವರಿಗೆ ಮತ್ತು ಧ್ವನಿ ವರ್ಧಕ ಸೇವೆ ,ಬೆಳಕಿನ ಸೇವೆ , ಶಾಮಿಯಾನ ಸೇವೆ ನೀಡಿದವರಿಗೆ ,ಡಮರುಗ ಸೇವೆ ಮಾಡಿಸಿದವರಿಗೆ, ಸ್ವರ ಸೇವೆ ನೀಡಿದವರಿಗೆ… ಹೀಗೆ ದೇಗುಲಕ್ಕೆ ಸಮರ್ಪಣೆ ಯಾಗುವ ವಿವಿಧ ಸೇವೆಗಳನ್ನ ನೀಡಿದಂತಹ ಭಕ್ತಾಭಿಮಾನಿಗಳನ್ನು ವಿಶೇಷವಾಗಿ ಗುರುತಿಸಲಾಗುವುದು.
ಶ್ರೀ ವರಬ್ರಹ್ಮ, ಶ್ರೀ ಸ್ವರ್ಣ ಯಕ್ಷಿ ,ಸ-ಪರಿವಾರ ದೇವಸ್ಥಾನಗಳ ಅನ್ನದಾನ ಸೇವೆಯು 2033 ರ ವರೆಗೆ ಮುಂಗಡ ಹೆಸರನ್ನ ನೋಂದಾಯಿಸಿಕೊಂಡಿದ್ದಾರೆ. ಪ್ರತಿವರ್ಷದಂತೆ ನಡೆಯುವ ಜಾತ್ರಾ ಮಹೋತ್ಸವಕ್ಕೆ ನಂಬಿದಂತಹ ಕುಟುಂಬ ವರ್ಗದವರು, ಭಕ್ತಾಭಿಮಾನಿಗಳು ,ಊರವರು ಪರವೂರವರು ಹಾಗೂ ಸಮಸ್ತ ಭಕ್ತಾಭಿಮಾನಿಗಳು ಆಗಮಿಸಿ, ವಾರ್ಷಿಕ ಹಾಲು ಹಬ್ಬ ಸೇವೆಯ ಮತ್ತು ಶ್ರೀ ವರಬ್ರಹ್ಮ, ಶ್ರೀ ಸ್ವರ್ಣ ಯಕ್ಷಿ, ನಾಗದೇವತೆ ಸ – ಪರಿವಾರ ದೇವಸ್ಥಾನದ ಕೃಪಾಕಟಾಕ್ಷಕ್ಕೆ ಪಾತ್ರರಾಗಬೇಕಾಗಿ ದೇವಸ್ಥಾನದ ಆಡಳಿತ ಮುಕ್ತೇಶ್ವರರಾದ ಶ್ರೀಯುತ ರವೀಂದ್ರ ಶೆಟ್ಟಿ ಉಳ್ತೂರು ಮತ್ತು ಅರ್ಚಕರಾದ ಶಿವರಾಮ ಉಡುಪ ಮತ್ತು ಶ್ರೀಧರ್ ಉಡುಪ ಹಾಗೂ ಅಧ್ಯಕ್ಷರು ಮತ್ತು ಸರ್ವ ಸದಸ್ಯರು, ಪದಾಧಿಕಾರಿಗಳು, ಶ್ರೀ ವರಬ್ರಹ್ಮ,ಶ್ರೀ ಸ್ವರ್ಣ ಯಕ್ಷಿ, ನಾಗದೇವತೆ ಸ-ಪರಿವಾರ ಧಾರ್ಮಿಕ ಟ್ರಸ್ಟ್, ಮೊಳಹಳ್ಳಿ ಇವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.