ಡೈಲಿ ವಾರ್ತೆ:15 ಮಾರ್ಚ್ 2023

ಚಲಿಸುತ್ತಿದ್ದ ಕಾರಿನಿಂದ ನೋಟುಗಳನ್ನು ರಸ್ತೆಗೆ ಎಸೆದ ವ್ಯಕ್ತಿ:(ವಿಡಿಯೋ ವೀಕ್ಷಿಸಿ)

ಗುರುಗ್ರಾಮ: ಚಲಿಸುತ್ತಿದ್ದ ಕಾರಿನಿಂದ ಕರೆನ್ಸಿ ನೋಟುಗಳನ್ನು ವ್ಯಕ್ತಿಯೊಬ್ಬ ರಸ್ತೆಗೆ ಎಸೆಯುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

ಹರಿಯಾಣದ ಗುರು ಗ್ರಾಮದಲ್ಲಿ ಈ ಘಟನೆ ನಡೆದಿದೆ. ಕಾರಿನ ಡಿಕ್ಕಿಯಲ್ಲಿ ಕುಳಿತ ಮುಖವನ್ನು ಅರ್ಧ ಮುಚ್ಚಿಕೊಂಡಿರುವ ವ್ಯಕ್ತಿಯು ಕರೆನ್ಸಿ ನೋಟುಗಳನ್ನು ರಸ್ತೆಗೆ ಎಸೆದಿದ್ದಾನೆ.ದೆಹಲಿ ನೋಂದಣಿ ಸಂಖ್ಯೆಯನ್ನು ಹೊಂದಿರುವ ಬಿಳಿ ಬಣ್ಣದ ಕಾರಿನಲ್ಲಿ ಕುಳಿತ ವ್ಯಕ್ತಿ ಹಣವನ್ನು ತೆಗೆದು ರಸ್ತೆಗೆ ತೂರುವುದು ವಿಡಿಯೋದಲ್ಲಿದೆ. ಈ ಸಂಬಂಧ ಪೊಲೀಸರು ಕೇಸ್ ದಾಖಲಿಸಿಕೊಂಡಿದ್ದು, ತನಿಖೆ ಕೈಗೊಂಡಿದ್ದಾರೆ.