ಡೈಲಿ ವಾರ್ತೆ:04 ಏಪ್ರಿಲ್ 2023

ಕೋಟ ಡಾ. ಶಿವರಾಮ ಕಾರಂತ ಸಾಧಕ ಸ್ತ್ರೀ ಪುರಸ್ಕಾರ ಪ್ರದಾನ

ಕೋಟ : ಡಾ. ಶಿವರಾಮ ಕಾರಂತ ಪ್ರತಿಷ್ಠಾನ(ರಿ)ಕೋಟ, ಡಾ. ಶಿವರಾಮ ಕಾರಂತ ಟ್ರಸ್ಟ್ (ರಿ) ಉಡುಪಿ, ಕೋಟತಟ್ಟು ಗ್ರಾಮ ಪಂಚಾಯತ್ ಆಶ್ರಯದಲ್ಲಿ ಸಿಂಧೂರ ಸಂಜೀವಿನಿ ಸಂಘ, ಕೋಟತಟ್ಟು, ಜೆ.ಸಿ.ಐ ಕಲ್ಯಾಣಪುರ, ನೆನಪು ಮೂವೀಸ್ ಕೋಟ ಸಹಯೋಗದಲ್ಲಿ ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಕೋಟದ ಡಾ. ಶಿವರಾಮ ಕಾರಂತ ಥೀಮ್ ಪಾರ್ಕ್‍ನಲ್ಲಿ ಡಾ. ಕಾರಂತ ಸಾಧಕ ಸ್ತ್ರೀ ಪುರಸ್ಕಾರ ಪ್ರದಾನ ಕಾರ್ಯಕ್ರಮ ಅಮ್ಮಾ… ಹಚ್ಚಿದೊಂದು ಹಣತೆ ಇನ್ನೂ ಬೆಳಗಿದೆ(ಅಭಿಮಾನದ ಗುಣಗಾನ) ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಡಾ. ಶಿವರಾಮ ಕಾರಂತ ಮಹಿಳಾ ಸಾಧಕ ಪುರಸ್ಕಾರವನ್ನು ರೇವತಿ ಶೆಟ್ಟಿ ಮಣೂರು ಪಡುಕೆರೆ, ಸುಧಾ ಕದ್ರಿಕಟ್ಟು, ತನುಜಾ ಕೋಟೇಶ್ವರ, ಸುಶ್ಮಿತಾ ಸಾಲಿಗ್ರಾಮ, ನಿಶಾ ಸಾಲಿಗ್ರಾಮ, ವೀಣಾ ನಾಯಕ್, ಮಾಲಿನಿ ರಮೇಶ್, ಸುಮನ ಹೇರ್ಳೆ,ಸುಶ್ಮಿತಾ ಪಾರಂಪಳ್ಳಿ, ಸ್ಪೂರ್ತಿ, ಲಲಿತಾ ನಾೈರಿ, ಶೋಭಾ ಗಾಣಿಗ, ಸುಪ್ರೀತಾ ಪುರಾಣಿಕ್, ಪ್ರತಿಮಾ ಯಡ್ತಾಡಿ, ಚೈತ್ರಾ ಆಚಾರ್ಯ ಕೋಟ ಅವರಿಗೆ ಪ್ರದಾನ ಮಾಡಲಾಯಿತು. ಹಾಗೂ ಕೋಟತಟ್ಟು ಗ್ರಾಮ ಪಂಚಾಯತ್ ಎಸ್‍ಎಲ್‍ಆರ್‍ಎಮ್ ಘಟಕದ ಮಹಿಳಾ ಸಿಬ್ಬಂದಿಗಳನ್ನು ಗೌರವಿಸಲಾಯಿತು.
ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಕಾರಂತ ಪ್ರತಿಷ್ಠಾನದ ಕಾರ್ಯಾಧ್ಯಕ್ಷ ಆನಂದ್ ಸಿ ಕುಂದರ್, ಉಡುಪಿ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕಿ ಪೂರ್ಣಿಮಾ, ಗೀತಾನಂದ ಫೌಂಡೇಶನ್ ಪ್ರವರ್ತಕಿ ಗೀತಾ ಆನಂದ್ ಸಿ ಕುಂದರ್, ಟ್ರಸ್ಟಿಗಳಾದ ಸುಶೀಲಾ ಸೋಮಶೇಖರ್, ಸುಬ್ರಾಯ ಆಚಾರ್ಯ, ಡಾ. ಶಿವರಾಮ ಕಾರಂತ ಅಧ್ಯಯನ ಸಂಶೋಧನ ಕೇಂದ್ರ ಸಾಲಿಗ್ರಾಮ ಅಧ್ಯಕ್ಷ ಗುರುರಾಜ್, ಕೋಟತಟ್ಟು ಗ್ರಾಮ ಪಂಚಾಯತ್ ಪಿ.ಡಿ.ಓ ರವೀಂದ್ರ ರಾವ್, ಕಾರ್ಯದರ್ಶಿ ಸುಮತಿ ಅಂಚನ್, ಸಿಂಧೂರ ಸಂಜೀವಿನಿ ಸಂಘ, ಕೋಟತಟ್ಟು ಅಧ್ಯಕ್ಷೆ ಸಂಗೀತಾ, ಜೆ.ಸಿ.ಐ ಕಲ್ಯಾಣಪುರ ಅಧ್ಯಕ್ಷೆ ಅನಿತಾ ನರೇಂದ್ರ ಕುಮಾರ್, ಕಾರ್ಯದರ್ಶಿ ಲವಿನಾ ಲೂಯಿಸ್, ಜೆ.ಸಿ.ಐ ಮಹಿಳಾ ನಿರ್ದೇಶಕಿ ಶಾಲಿನಿ ಸುರೇಶ್ ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಶಿಕ್ಷಕಿ ಸಾಹಿತಿ ಮಂಜುಳಾ ತೆಕ್ಕಟ್ಟೆ ನಿರೂಪಿಸಿ, ಪ್ರತಿಷ್ಠಾನದ ಕಾರ್ಯದರ್ಶಿ ನರೇಂದ್ರ ಕುಮಾರ್ ಕೋಟ ಸ್ವಾಗತಿಸಿ ಪ್ರಸ್ತಾಪಿಸಿದರು.