



ಡೈಲಿ ವಾರ್ತೆ:09 ಏಪ್ರಿಲ್ 2023


ದಕ್ಷಿಣಕನ್ನಡ: ಮನೆ ಮೇಲೆ ತೆಂಗಿನ ಮರ ಬಿದ್ದು ಹಾನಿ
ಬೆಳ್ತಂಗಡಿ: ಪಡಂಗಡಿ ಗ್ರಾಮದ ಬದ್ಯಾರು ಸಮೀಪದ ಕಳೆಂಜಿರೋಡಿ ಜೊಬೆಲ್ಲಾ ಫೆಲಿಕ್ಸ್ ಅವರ ಮನೆಗೆ ಶುಕ್ರವಾರ ರಾತ್ರಿ ತೆಂಗಿನ ಮರ ಬಿದ್ದ ಪರಿಣಾಮ ಮನೆ ಸಂಪೂರ್ಣ ಹಾನಿಗೀಡಾಗಿದೆ.
ಫೆಲಿಕ್ಸ್ ಅವರ ಪುತ್ರ ನವೀನ ಹಾಗೂ ಆತನ ಪತ್ನಿ, ಇಬ್ಬರು ಮಕ್ಕಳು ಮನೆಯಲ್ಲಿ ವಾಸವಾಗಿದ್ದರು. ಆದರೆ ಪೂಜೆ ನಿಮಿತ್ತ ಅವರೆಲ್ಲರೂ ಚರ್ಚ್‌ಗೆ ತೆರಳಿದ್ದರಿಂದ ಜೀವಹಾನಿ ತಪ್ಪಿದೆ. ಘಟನಾ ಸ್ಥಳಕ್ಕೆ ಪಂಚಾಯತ್ ಸಿಬಂದಿ ಭೇಟಿ ನೀಡಿದ್ಧಾರೆ.