ಡೈಲಿ ವಾರ್ತೆ: ಫೆ./08/2026

ಐಕ್ಯತೆಯ ಬದುಕು ದೇಶದ ಸರ್ವತೋಮುಖ ಅಭಿವೃದ್ಧಿಗೆ ಪೂರಕ , ಇಬ್ರಾಹಿಂ ಗಡಿಯಾರ್

ಬಂಟ್ವಾಳ : ಸಾಮರಸ್ಯ, ಸಹಬಾಳ್ವೆಯ ಸಮಾಜದ ನಿರ್ಮಾಣದ ಜೊತೆಗೆ ಸಾಮಾಜಿಕ, ಸಾಂಸ್ಕೃತಿಕ ಹಾಗೂ ಕ್ರೀಡಾ ಕ್ಷೇತ್ರದಲ್ಲಿ ಸೇವೆ ಮಾಡುತ್ತಿರುವ ಕೊಡಾಜೆ ಐಕ್ಯ ವೇದಿಕೆಯ ಕಾರ್ಯ ಶ್ಲಾಘನೀಯ ಎಂದು ದುಬಾಯಿಯ ಗಡಿಯಾರ್ ಗ್ರೂಪ್ ಆಫ್ ಕಂಪೆನಿಗಳ ಮಾಲೀಕ ಇಬ್ರಾಹಿಂ ಗಡಿಯಾರ್ ಮೆಚ್ಚುಗೆ ವ್ಯಕ್ತಪಡಿಸಿದರು.

ಕೊಡಾಜೆ ಐಕ್ಯ ವೇದಿಕೆಯ ಕಛೇರಿಗೆ ಭೇಟಿ ನೀಡಿದ ವೇಳೆ ಮಾತನಾಡಿದ ಅವರು ಊರಿನಲ್ಲಿ ಯಾವುದೇ ಜಾತಿ, ಧರ್ಮ, ಮತ ಬೇಧವಿಲ್ಲದ ವಾತಾವರಣ ನಿರ್ಮಾಣ ಅತೀ ಅಗತ್ಯವಾಗಿದ್ದು ಈ ನಿಟ್ಟಿನಲ್ಲಿ ಎಲ್ಲರೂ ಕೈಜೋಡಿಸಿದಾಗ ದೇಶದ ಸರ್ವತೋಮುಖ ಅಭಿವೃದ್ಧಿ ಸಾಧ್ಯ ಎಂದರು.

ಲಯನ್ ಡಾ. ಎ. ಮನೋಹರ್ ರೈ ಮಾತನಾಡಿ, ಜನರ ಕಷ್ಟಗಳಿಗೆ ಸ್ಪಂದಿಸುವ ಸಂಘಟನೆಗಳು, ಅದಕ್ಕೆ ಸಹಕಾರ ನೀಡುವ ದಾನಿಗಳು, ಏಕತೆಯ ಭಾವನೆಯನ್ನು ಮೈಗೂಡಿಸಿಕೊಂಡವರು ಸರ್ವ ಶ್ರೇಷ್ಠರು ಎಂದು ಅಭಿಪ್ರಾಯಪಟ್ಟರು.

ಐಕ್ಯ ವೇದಿಕೆಯ ಅಧ್ಯಕ್ಷ ಅಶ್ರಫ್ ಭಾರತ್ ಅಧ್ಯಕ್ಷತೆ ವಹಿಸಿದ್ದರು. ಇದೇ ವೇಳೆ ಇಬ್ರಾಹಿಂ ಗಡಿಯಾರ ಅವರ ಸಾಮಾಜಿಕ ಸೇವೆಯನ್ನು ಗುರುತಿಸಿ ಅವರನ್ನು ಸನ್ಮಾನಿಸಲಾಯಿತು.

ಐಕ್ಯ ವೇದಿಕೆಯ ಗೌರವಾಧ್ಯಕ್ಷ ಲತೀಫ್ ನೇರಳಕಟ್ಟೆ, ಸ್ಥಾಪಕಾಧ್ಯಕ್ಷ ಫಾರೂಕ್ ಗೋಳಿಕಟ್ಟೆ, ಸಾಂಸ್ಕೃತಿಕ ಕಾರ್ಯದರ್ಶಿ ಮನ್ಸೂರ್ ನೇರಳಕಟ್ಟೆ, ನಿಕಟಪೂರ್ವ ಕೋಶಾಧಿಕಾರಿ ರಿಯಾಝ್ ನೇರಳಕಟ್ಟೆ ಮೊದಲಾದವರು ಉಪಸ್ಥಿತರಿದ್ದರು.